ಡಿಸಿಎಂ ಅಶ್ವತ್ಥ್ ನಾರಾಯಣ್‌ ರಿಂದ ಪುತ್ತೂರಿನ ಶಾಸಕರ ವಾರ್ ರೂಂಗೆ ಆಕ್ಸಿಜನ್ ಕಾನ್ಸನ್‌ ಟ್ರೇಟರ್

ಪುತ್ತೂರು: ಕೋವಿಡ್ ಸೋಂಕಿನ ನಿಯಂತ್ರಣದಲ್ಲಿ ಪುತ್ತೂರು ಶಾಸಕರ ವಾರ್‌ರೂಮ್ ಮೂಲಕ ನಡೆಯುವ ಉತ್ತಮ ಕಾರ್ಯವೈಖರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್‌ರವರು ಪುತ್ತೂರು ಶಾಸಕರ ವಾರ್‌ರೂಮ್‌ಗೆ ಕೋವಿಡ್ ಸೋಂಕಿತ ರೋಗಿಗಳ ಆರೈಕೆಗಾಗಿ 5 ಕೃತಕ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ಹಸ್ತಾಂತರಿಸಿದರು.

ಶಾಸಕ ಸಂಜೀವ ಮಠಂದೂರುರವರು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಮಾತುಕತೆ ನಡೆಸಿದ ವೇಳೆ ಉಪಮುಖ್ಯಮಂತ್ರಿಗಳು ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅನ್ನು ನೀಡಿದ್ದಾರೆ. ಈ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

 

Related Posts

Leave a Reply

Your email address will not be published.