ಡೆಹ್ರಾಡೂನ್‌ನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ಕುಂದಾಪುರದ ಹನೀಶ್ ಕುಮಾರ್‌ಗೆ ಬೆಳ್ಳಿ ಪದಕ
ಪಿಯೊನಿಕ್ಸ್ ಅಕಾಡೆಮಿ ಇಂಡಿಯಾ ಕುಂದಾಪುರದ ಸದಸ್ಯ ಹನೀಶ್ ಕುಮಾರ್ ರವರಿಗೆ ಡೆಹ್ರಾಡೂನ್‌ನಲ್ಲಿ ನಡೆದ ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ಐವತ್ತು ಕೆ.ಜಿ ವಿಭಾಗದಲ್ಲಿ ಬೆಳ್ಳಿ ಹಾಗೂ ಇಪ್ಪತ್ತೊಂದು ವರ್ಷ ಒಳಗಿನ ವಯೋಮಿತಿಯ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ.
ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಪರವಾಗಿ ಕುಂದಾಪುರದ ಆರು ಮಂದಿ ಕರಾಟೆ ಪಟುಗಳು ಪ್ರತಿನಿಧಿಸಿದ್ದರು.
ಹನೀಶ್ ಕುಮಾರ್ ರವರು ಉಪ್ಪುಂದದ ನಂದನವನ ನಿವಾಸಿಗಳಾದ ಸಾವಿತ್ರಿ ರವಿಚಂದ್ರ ದಂಪತಿಗಳ ಪುತ್ರನಾಗಿದ್ದು,ಕರಾಟೆ ತರಬೇತುದಾರರಾದ ಕೀರ್ತಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದರು.