ತಂತ್ರಜ್ಞಾನದ ಕ್ರಿಯಾಶೀಲ ಸಾಧ್ಯತೆಗಳ ಮೂಲಕ ಜಾಗತಿಕ ವೃತ್ತಿಪರ ಅವಕಾಶ ಪಡೆಯಬಹುದು

ಉಜಿರೆ : ಡಿಜಿಟಲ್ ತಂತ್ರಜ್ಞಾನದ ಕ್ರಿಯಾಶೀಲ ನೈಪುಣ್ಯತೆಯೊಂದಿಗಿನ ತಂತ್ರಗಳನ್ನುರೂಢಿಸಿಕೊಳ್ಳುವ ಮೂಲಕ ಯುವಕರು ಜಾಗತಿಕ ವೃತ್ತಿಪರ ಅವಕಾಶಗಳನ್ನು ಪಡೆಯಬಹುದಾಗಿದೆ ಎಂದುಓಮನ್ ನ ಹಿರಿಯ ಕಲಾ ನಿರ್ದೇಶಕ ಲಕ್ಷ್ಮಿಕಾಂತ್ ಕಾನಂಗಿ ಹೇಳಿದರು.

ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ವೃತ್ತಿ ಮಾರ್ಗದರ್ಶನ ಮತ್ತು ಮಾನವ ಸಂಪನ್ನೂಲ ಕೇಂದ್ರ ಮತ್ತು ಪ್ಲೇಸ್ಮೆಂಟ್ ಸೆಲ್ ನ ಜಂಟಿ ಆಶ್ರಯದಲ್ಲಿ ಆನ್ಲೈನ್ ವೇದಿಕೆಯಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಜಾಗತಿಕ ವೆಬಿನಾರ್ ನ ಎರಡನೇ ಸಂಚಿಕೆಯಲ್ಲಿ “ಎನಿವನ್ ಕ್ಯಾನ್ಡಿಸೈನ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತಂತ್ರಜ್ಞಾನದ ಪ್ರಾಯೋಗಿಕ ಹಂತದಲ್ಲಿ ಕ್ರಿಯಾಶೀಲ ನೈಪುಣ್ಯತೆ ಹೊಂದಿದಲ್ಲಿಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ವೃತ್ತಿಪರ ಅವಕಾಶಗಳು ಸುಲಭವಾಗಿ ಲಭಿಸುತ್ತವೆಎಂದು ಅಭಿಪ್ರಾಯಪಟ್ಟರು.

ವಿನ್ಯಾಸದಲ್ಲಿ ಎಡೊಬ್ ಫೋಟೋ ಶಾಪ್, ಎಡೊಬ್ ಇಲ್ಯಸ್ಟ್ರೆಟರ್, ಎಡೊಬ್ ಇನ್ಡಿಸೈನ್,ಎಡೊಬ್ ಪ್ರೀಮಿಯರ್ ಪ್ರೊ ನಂತಹಾ ಅನೇಕ ಸಾಫ್ಟ್ವೇರ್ ಗಳಿದ್ದು ಅದನ್ನುಬಳಸಿಕೊಂಡು ಜಾಗತಿಕವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ. ವಿನ್ಯಾಸಗಳನ್ನುಮಾಡುವ ಸಮಯದಲ್ಲಿ ಪ್ರಾಮಾಣಿಕತೆ, ದೀರ್ಘಕಾಲದ ಬಾಳಿಕೆ, ಗ್ರಾಹಕರ ಬೇಡಿಕೆ, ತಂತ್ರಜ್ಞಾನದ ಬಳಕೆ, ಪರಿಸರಸ್ನೇಹಿ ವಿನ್ಯಾಸ, ಮೊದಲಾದ ತತ್ವಗಳನ್ನು ನೆನಪಿನಲ್ಲಿಇಟ್ಟುಕೊಳ್ಳುವುದು ಮುಖ್ಯ.
ಜೊತೆಗೆ ವಿನ್ಯಾಸಕ್ಕೆ ಅಗತ್ಯವಾದ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿಗ್ರಹಿಸಿಕೊಳ್ಳುವುದನ್ನು ಕಲಿಯಬೇಕು ಮಾತ್ರವಲ್ಲದೇ ಗ್ರಹಿಸಿದ್ದನ್ನು ವಿಭಿನ್ನವಾಗಿಪ್ರಯೋಗಿಸುವುದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

ಕಲಿಯುತ್ತಾ ಹೋದಂತೆಲ್ಲಾ ವಿನ್ಯಾಸ ಹೊಸತೇನನನ್ನೋ ಕಲಿಸುತ್ತದೆ. ಹೀಗಾಗಿ ನಮ್ಮನ್ನುನಾವು ವಿನ್ಯಾಸದ ಮೂಲಕ ಭಿನ್ನವಾಗಿ ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇಲ್ಲಿತಾಳ್ಮೆ, ಶ್ರದ್ಧೆ ಮತ್ತು ಸೃಜನಶೀಲತೆಗಳಿಗೆ ಅತೀ ಮಹತ್ವವಿದೆ. ತಾಳ್ಮೆಯಿಂದ ಕೆಲಸಮಾಡಿದಷ್ಟು ಯಶಸ್ಸು ನಮ್ಮದಾಗುತ್ತದೆ.

ವಿನ್ಯಾಸದಲ್ಲಿ ಸೃಜನಶೀಲತೆ ಅತ್ಯಂತ ನಿರ್ಣಾಯಕ. ಪರಿಕಲ್ಪನೆ ಮತ್ತು ಆಲೋಚನೆಗಳಿಗೆಸೃಜನಶೀಲತೆಯ ಸ್ಪರ್ಶ ನೀಡಿದಾಗ ಮಾತ್ರ ಉತ್ತಮ ವಿನ್ಯಾಸ ರೂಪುಗೂಳ್ಳುತ್ತದೆ. ಸೃಜನಶೀಲತೆನಿರಂತರವಾಗಿರಬೇಕು ಮತ್ತು ಆಲೋಚನೆಗಳು ಮೊನಚಾಗಬೇಕು ಎಂದು ಉದಾಹರಣೆ ಸಹಿತವಿವರಿಸಿದರು.

ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ವಿನ್ಯಾಸದಲ್ಲಿ ವಿಭಿನ್ನತೆ ಇರಬೇಕು. ಕಲಿಕೆಯ ಹಂತದಲ್ಲೇವಿನ್ಯಾಸದಲ್ಲಿನ ಕ್ರಿಯಾಶೀಲ ಪ್ರಯೋಗಗಳು ಭವಿಷ್ಯದ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸುತ್ತದೆ. ಎಲ್ಲರೊಳಗೆ ತನ್ನ ವಿನ್ಯಾಸ ಹೇಗೆ ಭಿನ್ನ ಎಂಬುದನ್ನುತೋರಿಸುವುವಂತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಅಬ್ದುಲ್ಲಾ ಮಾಡುಮೂಲೆ ಸ್ವಾಗತಿಸಿದರು, ಎಸ್. ಡಿ.ಎಂ. ಹಿರಿಯ ವಿದ್ಯಾರ್ಥಿ ಸಂಘದ ಸಂಯೋಜಕರಾದ ಶೈಲೇಶ್ ಕುಮಾರ್ ವಂದಿಸಿದರು. ಜಾಗತಿಕಹಿರಿಯ ವಿದ್ಯಾರ್ಥಿ ಸಂಘದ ಸಂಯೋಜಕರಾದ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಇನ್ನೂ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಸತೀಶ್ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಉಪನ್ಯಾಸಕರು, ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.