ತಲಪಾಡಿ, ಅಪ್ರಾಪ್ತೆಗೆ ಕಿರುಕುಳ : ಪೋಕ್ಸೊ ಕಾಯಿದೆಯಡಿ ಆರೋಪಿ ಬಂಧನ
ಉಳ್ಳಾಲ: ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂದು ಸಂಜೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಶಾಲೆಯಿಂದ ವಾಪಸ್ಸಾಗಿ ತಲಪಾಡಿ ಬಸ್ ನಿಲ್ದಾಣದಲ್ಲಿ ಬಸ್ಸಿಳಿದು ಸಹೋದರಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದಳು. ಇದೇ ವೇಳೆ ಅದೇ ನಿಲ್ದಾಣದಲ್ಲಿ ನಿಂತಿದ್ದ ಮುವಾದ್ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿ, ಮನೆಗೆ ಬಿಡುವುದಾಗಿ ಹೇಳಿ ಕೈಹಿಡಿದು ಎಳೆದಿದ್ದಾನೆ. ತಕ್ಷಣ ವಿದ್ಯಾರ್ಥಿನಿ ಬೊಬ್ಬಿಡಲು ಆರಂಭಿಸಿದಾಗ ಸ್ಥಳೀಯ ರಿಕ್ಷಾ ಚಾಲಕರು ಮುವಾದ್ ನನ್ನು ಹಿಡಿದು, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ