ತಳವಾರ ಸಮುದಾಯದವರಿಂದ ಎಸ್.ಟಿ ಪ್ರಮಾಣ ಪತ್ರಕ್ಕಾಗಿ ಊರಿಗೊಂದು ಬಡಿಗೆ ಹೋರಾಟದ ಎಚ್ಚರಿಕೆ

ಕೇಂದ್ರ ಸರ್ಕಾರವು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ( ಎಸ್.ಟಿ ) ಮೀಸಲಾತಿಗೆ ಸೇರ್ಪಡೆಗೋಳಿಸಿದೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಎಸ್ .ಟಿ ಪ್ರಮಾಣ ಪತ್ರ ಕೊಡುತ್ತಿವೆ ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ಮೀಸಲಾತಿಯಿಂದ ದೂರವಿಟ್ಟು ತಳವಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಇದರಿಂದ ಶೈಕ್ಷಣಿಕ ಮತ್ತು ಸರ್ಕಾರಗಳ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಷ್ಟಾದರು ಸರ್ಕಾರ ನಮ್ಮ ತಳವಾರ ಸಮುದಾಯದವನ್ನು ಪರಿಗಣಿಸುತ್ತಿಲ್ಲ ಎಂದು ರನ್ನಬೆಳಗಲಿ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಬಡಿಗೆಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ತಳವಾರ ಸಮುದಾಯದ ಜನಕ್ಕೆ ಇನ್ನೂ ಮುಂದಿನ ದಿನಮಾನಗಳಲ್ಲಿ ಎಸ್.ಟಿ ಪ್ರಮಾಣ ಪತ್ರ ನೀಡದಿದ್ದರೆ ಊರಿಗೆ ನೂರು ಬಡಿಗೆ ಹಿಡಿದು ಉಗ್ರ ಹೋರಾಟ ಮಾಡುವುದಾಗಿ ತಳವಾರ ಮತ್ತು ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶ್ರೀ ಶಿವಾಜಿ ಮೇಟಗಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಇದೇ ಸಂದರ್ಭದಲ್ಲಿ ಮೂರು ಜಿಲ್ಲೆಗಳಿಂದ ಜನ ಭಾಗವಹಿಸಿದ್ದರು.

Related Posts

Leave a Reply

Your email address will not be published.