ತುಳು, ಕನ್ನಡ ರಂಗಭೂಮಿ ನಟಿ ಸುಮಿತ್ರಾ ರೈ ಇನ್ನಿಲ್ಲ
ತುಳು ಕನ್ನಡ ರಂಗಭೂಮಿಯ ಹಿರಿಯ ರಂಗಕಲಾವಿದ , ಶ್ರೀ ನಂದಿಕೇಶ್ವರ ನಾಟಕ ಸಂಘದ ರೂವಾರಿ ದಿ. ಪಿ.ಬಿ ರೈ ಯವರ ಧರ್ಮ ಪತ್ನಿ, ನಾಟಕ ಕಲಾವಿದೆ ಶ್ರೀಮತಿ ಬೇಬಿ ಯಾನೆ ಸುಮಿತ್ರ ರೈ (76 )ಇಂದು ಮಂಜೇಶ್ವರ ಸಮೀಪದ ಕುಂಜತ್ತೂರಿನ ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು. ದಿವಂಗತರು ಖ್ಯಾತ ಗುಬ್ಬಿ ವೀರಣ್ಣ ನಾಟಕ ಕಂಪನಿ, ಬಸವರಾಜ ಬಡಿಗೇರ ಮತ್ತು ತಮ್ಮ ಪತಿಯವರು ಕಟ್ಟಿ ಬೆಳೆಸಿದ ಶ್ರೀ ನಂದಿಕೇಶ್ವರ ನಾಟಕ ಸಂಘದಲ್ಲಿ ರಂಗನಟಿಯಾಗಿ, ಹಾಗೂ ಹಲವಾರು ಚಲನಚಿತ್ರಗಳಲ್ಲಿ ಸುಮಾರು ಐವತ್ತು ವರುಷಗಳ ಕಾಲ ನಟಿಸಿದ್ದಾರೆ. ಅವರು ಪುತ್ರ ಕಿರುತೆರೆ ಮತ್ತು ರಂಗಭೂಮಿ ನಟ ರಾಘವೇಂದ್ರ ರೈ ಮತ್ತು ಪುತ್ರಿ ಸಿನೇಮಾ ರಂಗಭೂಮಿ ಕಿರುತೆರೆ ನಟಿ ಶೋಭಾ ರೈ ಯವರನ್ನು ಅಗಲಿದ್ದಾರೆ.