ತುಳು ದಿನ ಆಚರಣೆ ಮತ್ತು ಪರಿಷ್ಕ್ರತ ತುಳು ಜ್ಞಾತಿಪಾದಸಂಚಯ ಡಿಜಿಟಲ್ ಆವೃತ್ತಿ ಲೋಕಾರ್ಪಣೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಗಾಂಧಿಜಯಂತಿಯ ಸಂದರ್ಭದಲ್ಲಿ ತುಳುದಿನವನ್ನು ಐಲೇಸಾ ತಂಡದ ಸಹಯೋಗದೊಂದಿಗೆ ಅಕ್ಟೋಬರ್ ೨ರಂದು ಆನ್ ಲೈನ್ ಮೂಲಕ ಆಚರಿಸಲಿದ್ದು ಇದರಲ್ಲಿ ವಿಶ್ವವಿದ್ಯಾನಿಲಯದ ಮಹತ್ ಭಾಷಾ ಯೋಜನೆಯಾದ ’ಪರಿಷ್ಕ್ರತ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಕುಲಾಧಿಪತಿಯವರಾದ ಶ್ರೀ ಯನ್, ವಿನಯ ಹೆಗ್ಡೆಯವರು ಲೋಕಾರ್ಪಣೆ ಮಾಡಲಿದ್ದಾರೆ.

ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿಯವರಾದ ಡಾ. ಎಂ. ಎಸ್ ಮೂಡಿತ್ತಾಯರು, ಕುಲಸಚಿವರಾದ ಡಾ. ಅಲ್ಕಾ ಕುಲಕರ್ಣಿ, ಐಲೇಸಾ ತಂಡದ ಸಂಯೋಜಕರಾದ ಶ್ರೀ ರಮೇಶ್ ಚಂದ್ರ, ಹಾಗೂ ಶ್ರೀ ಶಾಂತಾರಾಮ ಶೆಟ್ಟಿಯವರು, ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯ, ಡಾ, ಸಾಯಿಗೀತಾ, ತಾಂತ್ರಿಕ ಬಳಗದ ಪ್ರದ್ಯೋತ ಹೆಗ್ಡೆ, ಉಪಸ್ಥಿತರಿರುತ್ತಾರೆ.

ಮಣಿಪಾಲ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್‌ನ ನಿರ್ದೇಶಕರಾದ ಪ್ರೊ. ವರದೇಶ ಹಿರೇಗಂಗೆಯವರು ಗಾಂಧಿಸ್ಮರಣೆಯನ್ನು ನಡೆಸಿಕೊಡಲಿದ್ದಾರೆ.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ.ಡಾ. ಸತೀಶ್ ಕುಮಾರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ. ಡಾ. ಪಿ.ಎಸ. ಯಡಪಡಿತ್ತಾಯರು, ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಪ್ರೊ.ಡಾ. ಶಾಂತಾರಾಮ ಶೆಟ್ಟಿಯವರು, ನಿಟ್ಟೆ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ.ಡಾ. ರಮಾನಂದ ಶೆಟ್ಟಿಯವರು, ಆಲ್ ಅಮೆರಿಕಾ ತುಳು ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ ಮಾಳ – ಶುಭಸಂದೇಶಗಳನ್ನು ನೀಡಲಿದ್ದಾರೆ.

ಇದರ ಬಳಿಕ ಐಲೇಸಾ-ದ ವಾಯ್ಸ್ ಆಫ್ ಓಷನ್ ತಂಡದಿಂದ ಐಲೇಸಾ ನಮನ ಗಾನ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಕಾರ್ಯಕ್ರಮ ನಿಟ್ಟೆ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.https://tinyurl.com/nittetube

Related Posts

Leave a Reply

Your email address will not be published.