ತುಳು ಪರಿಷತ್ – ವಿ ಫೋರ್ ನ್ಯೂಸ್ ವತಿಯಿಂದ ಆಟಿದ ಪಾತೆರಕತೆ ಬೊಕ್ಕ ಕಬಿಗೋಷ್ಠಿ
ಹಳೆಯ ಕಾಲದ ತುಳುನಾಡಿನ ಬದುಕು ಪರಿಶ್ರಮದ ಹಾಗೂ ಕಷ್ಟದ ಬದುಕಾಗಿತ್ತು, ಈ ವಿಚಾರವನ್ನು ಹೊಸ ತಲೆಮಾರಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಒಎನ್ಜಿಸಿ ಎಂ.ಆರ್.ಪಿ.ಎಲ್ ಸಂಸ್ಥೆಯ ಡಿ.ಜಿ.ಎಂ ವೀಣಾ ಶೆಟ್ಟಿ ಅವರು ಹೇಳಿದರು.
ಅವರು ತುಳು ಪರಿಷತ್ ಮತ್ತು ವೀ ಫೋರ್ ನ್ಯೂಸ್ ಕರ್ನಾಟಕ ವಾಹಿನಿ ಜಂಟಿಯಾಗಿ ಆಯೋಜಿಸಿದ “ಆಟಿದ ಪಾತೆರಕತೆ ಮತ್ತು ಕಬಿಗೋಷ್ಠಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ನಾಡಿನ ಮೂಲ ಆಸ್ಮಿತೆಯನ್ನು ಮರೆ ಮಾಚುವ ಪ್ರಯತ್ನ ನಡೆದಿದೆ. ಹಿಂದಿನ ಕಾಲದ ನೈಜ ತುಳುನಾಡಿನ ಚಿತ್ರಣವನ್ನು ಮುಂದಿಡಬೇಕಾಗಿದೆ. ತುಳುನಾಡಿನ ಅನೇಕ ವಿಚಾರಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಇಂದಿರಾ ಹೆಗ್ಡೆ ಅವರು ಹೇಳಿದರು.
ಹಿರಿಯ ವಿಮರ್ಶಕಿ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಕಾಸರಗೋಡು ನೆಲೆಯ ತುಳುವಿನ ಆಸ್ಮಿತೆಯ ಬಗ್ಗೆ ಮಾತನಾಡಿದರು, ದಯಾನಂದ ಪುತ್ರನ್ ಹಾಗೂ ಯಶವಂತ ಬೋಳೂರು ಅವರು ಮೀನುಗಾರ ಸಮುದಾಯದ ಆಟಿ ಮಾಸದ ಬದುಕಿನ ಬಗ್ಗೆ ಮಾತನಾಡಿದರು. ತುಳು ಪರಿಷತ್ ಗೌರವ ಅಧ್ಯಕ್ಷರಾದ ಸ್ವರ್ಣ ಸುಂದರ್ ಹಾಗೂ ಡಾ. ಪ್ರಭಾಕರ ನೀರ್ಮಾರ್ಗ , ತಿಮ್ಪಪ್ಪ ಪುಜಾರಿ, ಚಂದ್ರಹಾಸ ಕಣಂತೂರು ಅವರು ಮಂಗಳೂರು ತುಳುವರ ನೆಲೆಯಲ್ಲಿ , ಮಹಮ್ಮದ್ ಬಡ್ಡೂರು ಅವರು ಬ್ಯಾರಿ ಸಮುದಾಯದ ಹಿನ್ನೆಲೆಯಲ್ಲಿ , ಎಡ್ವರ್ಡ್ ಲೊಬೊ ತೊಕ್ಕುಟ್ಟು ಮತ್ತು ಅಸುಂತಾ ಡಿಸೋಜಾ ಅವರು ಕೆಥೊಲಿಕ್ ಕ್ರೈಸ್ತ ಸಮುದಾಯದ ಹಿನ್ನೆಲೆಯಲ್ಲಿ , ಬೆನೆಟ್ ಅಮ್ಮನ್ನ ಅವರು ಪ್ರಾಟೆಸ್ಟಂಟ್ ಕ್ರೈಸ್ತ ಸಮುದಾಯದ ಹಿನ್ನಲೆಯಲ್ಲಿ ಆಟಿ ಮಾಸದ ವಿಶೇಷತೆ ಬಗ್ಗೆ ಮಾತನಾಡಿ ಕವನ ವಾಚಿಸಿದರು.
ಶಾಂತ ಕುಂಟಿನಿ , ರಾಜವರ್ಮ ವಿಟ್ಲ, ಸುಂದರ ಶೆಟ್ಟಿ ಬೆಟ್ಟಂಪ್ಪಾಡಿ , ಡೊಂಬಯ್ಯ ಇಡ್ಕಿದು , ಮಲ್ಲಿಕಾ ಜೆ ರೈ ಪುತ್ತೂರು , ಚಂದ್ರಕಲಾ ರಾವ್ ಅವರು ಆಟಿ ಮಾಸದ ಹಿನ್ನೆಲೆಯಲ್ಲಿ ಮಾತನಾಡಿ ಕವನ ವಾಚಿಸಿದರು. ವಿ ಫೋರ್ ನ್ಯೂಸ್ ಕರ್ನಾಟಕ ಟಿ.ವಿ ವಾಹಿನಿಯ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಅವರು ಮಾತುಕತೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದರಿಗೆ ಸ್ಮರಣಿಗೆ ನೀಡಿ ಗೌರವಿಸಿದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ವಂದಿಸಿದರು.