ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಪ್ರತಿಭಟನೆ ಮಾಡದಂತೆ ನೋಟಿಸ್ ಬೇಸರ ತಂದಿದೆ : ಯೋಗೀಶ್ ಶೆಟ್ಟಿ ಜೆಪ್ಪು

ದಕ್ಷಿಣ ಕನ್ನಡ ಜಿಲ್ಲೆಯ ತುಳು ಅಧಿಕೃತ ಭಾಷೆ ಪೊರಂಬಾಟ್ ಸಮಿತಿ ವತಿಯಿಂದ ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವು. ಆದರೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರಿಂದ ಪ್ರತಿಭಟನೆಯನ್ನು ರದ್ದುಮಾಡಬೇಕಿತ್ತು. ರಾಜಕೀಯ ಕಾರ್ಯಕ್ರಮ, ರಾಜಕೀಯ ಪ್ರತಿಭಟನೆಗೆ ಅವಕಾಶ ಕೊಡುತ್ತಾರೆ. ಆದರೆ ನಮ್ಮ ತುಳುವರ ಶಾಂತಿಯುತ ಪ್ರತಿಭಟನೆಗೆ ಯಾಕೆ ಅವಕಾಶ ನೀಡಿಲ್ಲ ಎಂದು ಯೋಗೀಶ್ ಶೆಟ್ಟಿ ಜೆಪ್ಪು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ರದ್ದು ಮಾಡಿದ್ದೇವೆ. ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಕೊಡುತ್ತಾರೆ. ರಾಜಕೀಯ ಪ್ರತಿಭಟನೆಗೆ ಅವಕಾಶ ಕೊಡುತ್ತಾರೆ. ಆದರೆ ನಮ್ಮ ತುಳುವರ ಶಾಂತಿಯುತ ಪ್ರತಿಭಟನೆಗೆ ಮಾತ್ರಾ ಕೋವಿಡ್ ನಿಯಮಾನಾ ಎಂದು ಪ್ರಶ್ನಿಸಿದ್ದ ಅವರು, ತುಳು ಭಾಷೆಗೆ ಮಾನ್ಯತೆ ಕೊಡುವ ವಿಚಾರ ಎಲ್ಲಿಯವರೆಗೆ ತಲುಪಿದೆ ಎಂದು ನಮಗೆ ಕೂಡಲೇ ತಿಳಿಸಬೇಕು. ಪ್ರತಿಭಟನಾಕಾರರಿಗೆ ತೊಂದರೆ ಆಗಬಾರದು, ಲಾಠಿ ಚಾರ್ಜ್ ಆಗಬಾರದು ಎಂದುಪ್ರತಿಭಟನೆ ನಿಲ್ಲಿಸಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ನಾವು ಖಂಡಿತಾ ಹೋರಾಟ ಮಾಡುತ್ತೇವೆ. ಪ್ರತಿಭಟನೆ ಮಾಡದಂತೆ ನೋಟಿಸ್ ನೀಡಿದಕ್ಕೆ ಬೇಸರ ಇದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಆನಂತರ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್ ಆಳ್ವ ಮಾತನಾಡಿ, ತುಳು ಬಾಷೆಗೆ ಮಾನ್ಯತೆ ಸಿಗಬೇಕೆಂಬ ಉದ್ದೇಶದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವು. ಈ ಪ್ರತಿಭಟನೆ ನಡೆಸುವ ಸಲುವಾಗಿ ಪೊಲೀಸರಿಗೆ ಮನವಿಯನ್ನು ನೀಡಿದ್ದೇವು. ಆದರೆ ನಮಗೆ ಪ್ರತಿಭಟನೆ ಮಾಡಬೇಡಿ ಎಂದು ನೋಟಿಸ್ ನೀಡಿದ್ದಾರೆ. ಈ ನೋಟಿಸ್ ನೀಡಿದ್ದರ ಉದ್ದೇಶ ಏನು ಎಂದು ನಮಗೆ ತಿಳಿಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಳು ಅಧಿಕೃತ ಭಾಷೆ ಪೊರಂಬಾಟ್ ಸಮಿತಿಯವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.