ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ : ಸ್ಥಳೀಯ ನಾಗರಿಕರಿಂದ ದೂರು
ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 2016-17 ರಲ್ಲಿ ಮಂಜೇಶ್ವರ ಹಾರ್ಬರ್ ಇಂಜಿನಿಯರಿಂಗ್ ಉಸ್ತುವಾರಿಯಲ್ಲಿ ಮಂಜೂರಾದ. ಪಂಡ್ ನಿಂದ ನಡೆಸಿದ 685 ಮೀಟರ್ ವ್ಯಾಪ್ತಿಯಲ್ಲಿ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ವಿಜಿಲೆನ್ಸ್ ಇಲಾಖೆಯಲ್ಲಿ ಸ್ಥಳೀಯ ನಾಗರಿಕರಿಂದ ಹಾಗೂ ಬಿಜೆಪಿ ಮತ್ತು ಸಿಪಿಎಂ ಲೋಕಲ್ ಕಮಿಟಿಯ ವತಿಯಿಂದ ದೂರು ದಾಖಲಿಸಿದ್ದಾರೆ.
ಕಾಮಗಾರಿ ನಡೆದ ಬಳಿಕ ಈ ರಸ್ತೆಗೆ ಕೇವಲ ಒಂದು ತಿಂಗಳಿನ ಆಯಸ್ಸು ಕೂಡಾ ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಇಲಾಖೆಯಿಂದ ಅಧಿಕಾರಿಗಳು ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಕಾಮಗಾರಿಯ ಪೂರ್ತಿ ಹಣವನ್ನು ನೀಡದಂತೆ ತಡೆ ಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಹಲವು ಕಡೆ ಪೇಚಾಡಿ ಕೂಡಾ ಗುತ್ತಿಗೆದಾರನಿಗೆ ಕಾಮಗಾರಿಯ ಹಣವನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಪುನಃ ಹದೆಗೆಟ್ಟ ರಸ್ತೆಯ ಮೇಲಿಗೆ ಕೇವಲ ಸಿಮೆಂಟ್ ಮಿಶ್ರೀತ ರೀತಿಯ ನೀರನ್ನು ಹಾಕಿ ನಾಗರೀಕರ ಕಣ್ಣಿಗೆ ಮಣ್ಣೆರಚಲು ಆಗಮಿಸಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.