ತೌಕ್ತೆ ಚಂಡಮಾರುತದಿಂದ ಅಪಾಯದಲ್ಲಿರುವ ಮನೆಗಳು: ಮನೆ ಸಂರಕ್ಷಿಸುವ ಕಾರ್ಯ ಸರ್ಕಾರ ಮಾಡಬೇಕಿದೆ: ಶಾಸಕ ಖಾದರ್
ಉಳ್ಳಾಲ: ಕಡಲ್ಕೊರೆತ ಸಂಬಂಧ ಪಟ್ಟ ಹಾಗೆ ತೌಕ್ತೆ ಚಂಡಮಾರುತ ದಿಂದ ಸೋಮೇಶ್ವರ, ಉಳ್ಳಾಲ, ಕೋಟೆಪುರ, ಭಟ್ಟಂಪಾಡಿಯಲ್ಲಿ ಮನೆಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಮೊಗವೀರ ಪಟ್ನದಿಂದ ಸೋಲಾರ್ ಕ್ಲಬ್ ವರೆಗೆ ಹಾಗೂ ಪೆರಿಬೈಲ್ ರೋಹಿತ್ ಮಾಸ್ಟರ್ ಮನೆ ಕೋಟೆಬಾಗಿಲು, ನಾಗೇಶ್, ಬೆಟ್ಟಂಪಾಡಿಯವರ ಮನೆ ಅಪಾಯದಲ್ಲಿದೆ, ಇದನ್ನು ಸಂರಕ್ಷಿಸುವ ಕಾರ್ಯ ಸರಕಾರ ಮಾಡಬೇಕಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಕೊಣಾಜೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈವರೆಗೆ ಸರಿಪಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಿಲ್ಲ. ಇವತ್ತಿನವರೆಗೆ ಅಲ್ಲಿ ಸಂರಕ್ಷಿಸುವ ಕೆಲಸ ಪ್ರಾರಂಭವಾಗಿಲ್ಲ, ಕಡಲಂಚಿನ ಜನರು ಭಯದ ವಾತಾವರಣದಲ್ಲಿ ಇದ್ದಾರೆ.ಜಿಲ್ಲಾಧಿಕಾರಿ ಕಚೇರಿರಯಲ್ಲಿ ನಡೆದಬಸಭೆಯಲ್ಲಿ ಸ್ಪಷ್ಟವಾಗಿಬಹೇಳಲಾಗಿತ್ತು ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಂಭಂಧ ಪಟ್ಟ ಸಭೆ ಮಂಗಳೂರಿನಲ್ಲಿ ನಡೆಯಬೇಕು.ಬೆಂಗಳೂರಿನ ಎ.ಸಿ ಕೋಣೆಯಲ್ಲಿ ಅಧಿಕಾರಿಗಳಿಗೆ ಕಡಲಿನಂಚಿನಲ್ಲಿರುವ ಸಮಸ್ಯೆ ತಿಳಿಯುವುದಿಲ್ಲ ಆದ್ದರಿಂದ ಉನ್ನತವಮಟ್ಟದಬಸಭೆ ಮಂಗಳೂರಿನಲ್ಲಿಯೇ ನಡೆಯಬೇಕು. ಬೆಂಗಳೂರಿನಲ್ಲೂ ಸಭೆ ಆಗಿಲ್ಲ, ಮಂಗಳೂರಿನಲ್ಲೂ ಸಭೆ ಆಗಿಲ್ಲ, ಮೀನುಗಾರರ ಮನೆ ಹಾನಿಯಾದಲ್ಲಿ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಎಂದು ಆರೋಪಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಮಾಜಿ ಜಿಲ್ಲಾ ಪ. ಸದಸ್ಯ ಎನ್.ಎಸ್.ಕರೀಂ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪದ್ಮನಾಭ ನರಿಂಗಾನ ಮತ್ತಿತರರು ಉಪಸ್ಥಿತರಿದ್ದರು.