ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿ ಪರಿಶೀಲನೆಗೆ ಕೇಂದ್ರದ ತಂಡ ಉಡುಪಿಗೆ ಆಗಮನ

ಕುಂದಾಪುರ: ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ಕಾರ್ಯವನ್ನು ಗುರುವಾರ ಆರಂಭಿಸಿದೆ.

ತಿಂಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗಿ ತೌಕ್ತೆ ಚಂಡಮಾರುತ ಎದ್ದಿತ್ತು. ಸುಮಾರು ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯ ಉದ್ದಕ್ಕೂ ಭಾರಿ ಗಾಳಿ-ಮಳೆ ಉಂಟಾಗಿತ್ತು. ಸಮುದ್ರ ಕೊರೆತದ ಜೊತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ರಸ್ತೆ , ಕೃಷಿ ಬೆಳೆಗಳು ಹಾನಿಗೀಡಾಗಿದ್ದವು. ಮನೆ ಮೀನುಗಾರಿಕಾ ಶೆಡ್ ಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿತ್ತು. ಎಲ್ಲಾ ಅನಾಹುತಗಳ ಪರಿಶೀಲನೆಗಾಗಿ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ನಡೆಸಿದೆ.

ಶೀರೂರು, ಯಡ್ತರೆ, ಮರವಂತೆ ,ಬೈಂದೂರು ಉಪ್ಪುಂದ ಕಂಚಿಗೋಡ್ ಉಡುಪಿ ಕಾಪು ಪಡುಬಿದ್ರೆ ಭಾಗಗಳಲ್ಲಿ ತೆರಳಿ ಕೇಂದ್ರ ಗ್ರಹ ಇಲಾಖೆಯ ಸುಶೀಲ್ ಪಾಲ್ ನೇತೃತ್ವದ ತಂಡ ಎರಡು ದಿನಗಳ ಕಾಲ ಕರಾವಳಿ ಪ್ರವಾಸ ನಡೆಸಲಿದೆ. ಕರಾವಳಿಯ ಮೂರು ತಾಲೂಕುಗಳಲ್ಲಿ ಈ ತಂಡ ಅಧ್ಯಯನ ನಡೆಸಿ ವರದಿಯನ್ನು ತಯಾರುಮಾಡಿ ದೆಹಲಿಯಲ್ಲಿ ಗೃಹ ಸಚಿವಾಲಯಕ್ಕೆ ನೀಡಲಿದೆ. ಆನಂತರ ಕೇಂದ್ರ ವಿಶೇಷ ಪರಿಹಾರ ಘೋಷಣೆ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಜಿ ಜಗದೀಶ್, ಎಸಿ ಕೆ. ರಾಜು, ಕೆಎಸ್ಪಿ ಕುಮಾರ ಚಂದ್ರ ಸೇರಿದಂತೆ ಜಿಲ್ಲೆಯ ಕಂದಾಯ ಅಧಿಕಾರಿಗಳು ತಹಶೀಲ್ದಾರ್ ಪರಿಶೀಲನೆ ಸಂದರ್ಭ ಇದ್ದರು.

Related Posts

Leave a Reply

Your email address will not be published.