ದಕ್ಷಿಣ ಭಾರತ ಪ್ರವಾಸೋದ್ಯಮ ಉತ್ಸವ : ಕೇಂದ್ರ ಸಚಿವರೊಂದಿಗೆ ಸಮಾಲೋಚನಾ ಸಭೆ

ದಕ್ಷಿಣ ಭಾರತ ಪ್ರವಾಸೋದ್ಯಮ ಉತ್ಸವವನ್ನು ಆಯೋಜಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.

ಈ ಉತ್ಸವವು ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರಾದ ಕಿಶನ್ ರೆಡ್ಡಿ ಅವರು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆಗೆ ಹಾಗೂ ರಾಜ್ಯ ಅರಣ್ಯ ಮತ್ತು ವಸತಿ ಧಾಮಗಳ ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ ಅವರೊಂದಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಸಮಾಲೋಚನೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ , ಇಲಾಖೆಯ ಆಡಳಿತ ನಿರ್ದೇಶಕ ವಿಜಯ ಶರ್ಮ , ಇಲಾಖೆಯ ನಿರ್ದೇಶಕಿ ಸಿಂಧೂ ಬಿ ರೂಪೇಶ್ , ರಾಜ್ಯ ಅರಣ್ಯ ಮತ್ತು ವಸತಿ ಧಾಮಗಳ ಎಂ.ಡಿ ಕುಮಾರ್ ಪುಷ್ಕರ್ ಉಸಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ಅರಣ್ಯ ಮತ್ತು ವಸತಿ ಧಾಮಗಳ ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ ಅವರು ಸನ್ಮಾನಿಸಿದರು.

Related Posts

Leave a Reply

Your email address will not be published.