ದಡ್ಡಲಕಾಡು ಶಾಲೆಯ ನೂತನ ವಿದ್ಯಾರ್ಥಿ ಮಂಡಲ ರಚನೆ

ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚಿಸಲಾಯಿತು. ನೂತನ ವಿದ್ಯಾರ್ಥಿ ನಾಯಕರು, ವಿರೋಧ ಪಕ್ಷ ನಾಯಕರು ಹಾಗೂ ಮಂತ್ರಿಮಂಡಲದ ಸಚಿವರಿಗೆ ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಪ್ರಮಾಣ ವಚನ ಭೋದಿಸಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಮಂತ್ರಿ ಮಂಡಲದ ಸಚಿವರಿಗೆ ಶುಭ ಕೋರಿ ಮಾತನಾಡಿ ಶಾಲೆಯ ಆಗು ಹೋಗುಗಳ ಬಗ್ಗೆ ಮಂತ್ರಿಮಂಡಲದ ಸಚಿವರು ಗಮನ ಹರಿಸುವಂತೆ ತಿಳಿಸಿದರು. ಈ ಸಂದರ್ಭ ಪ್ರೌಢಶಾಲಾ ವಿಭಾಗದ ಕಾರ್ಯಧ್ಯಕ್ಷ ಪುರುಷೋತ್ತಮ ಅಂಚನ್, ಪಂಜಿಕಲ್ಲು ಗ್ರಾ.ಪಂ. ಸದಸ್ಯ ಪೂವಪ್ಪ ಮೆಂಡನ್, ಎಸ್‌ಡಿಎಂಸಿ ನಿಕಟಪೂರ್ವಾಧ್ಯಕ್ಷ ರಾಮಚಂದ್ರ ಪೂಜಾರಿ ಕಂರೆಂಕಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನಿತಾ ಕುಮಾರಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

 

Related Posts

Leave a Reply

Your email address will not be published.