ದಲಿತ ಬಾಲಕಿಗೆ ಲೈಂಗಿಕ ಪ್ರಕರಣ : ಮಹಿಳಾ ಠಾಣೆ ಎದುರು ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು; ಅಪ್ರಾಪ್ತ ಆದಿದ್ರಾವಿಡ ಜನಾಂಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ರಾಜು ಹೊಸ್ಮಠ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಜಿಲ್ಲಾಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಆಗ್ರಹಿಸಿದ್ದಾರೆ.

ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರು ಮಹಮ್ಮಾಯಿ ದೇವಳದ ಬಳಿಯಲ್ಲಿರುವ ಸಂಘಟನಾ ಕಚೇರಿಯಲ್ಲಿ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಇವರಿಬ್ಬರೂ ಅಕ್ಕ-ತಂಗಿಯಾಗಿದ್ದಾರೆ. ಆರೋಪಿ ವಿರುದ್ಧ ಮಹಿಳಾ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಯನ್ನು ಬಂಧಿಸಿಲ್ಲ. ಮುಂದಿನ 10 ದಿನಗಳ ಒಳಗಾಗಿ ಆರೋಪಿ ರಾಜು ಹೊಸ್ಮಠನನ್ನು ಬಂಧಿಸದಿದ್ದರೆ, ಮಹಿಳಾ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಪುತ್ತೂರು ನಗರಸಂಚಾಲಕ ಕೇಶವ ಪಡೀಲ್, ಸಂಚಾಲಕ ಹರೀಶ್ ಬಿ.ಕೆ ಶೇಖಮಲೆ, ಕೋಶಾಧಿಕಾರಿ ಸತೀಶ್ ಶೇಖಮಲೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಶೀನ ಬಾಲಿಲ ಉಪಸ್ಥಿತರಿದ್ದರು.

Related Posts

Leave a Reply

Your email address will not be published.