ದಿಲ್‌ರಂಗ್-2 ತುಳು ಸಿನಿಮಾ : ದುಬೈನಲ್ಲಿ ಸಿನಿಮಾದ ಪೋಸ್ಟರ್ ಬಿಡುಗಡೆ

ಬಹುನಿರೀಕ್ಷೆಯ ದಿಲ್ ರಂಗ್-2 ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ದುಬೈಯಲ್ಲಿ ನಡೆಯಿತು. ದುಬೈಯ ಕಲಾ ಪೋಷಕ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ ಅವರು ಪೋಸ್ಟರನ್ನು ಬಿಡುಗಡೆಗೊಳಿಸಿದರು.v4news

ಕ್ರಿಯೇಟಿವ್ ಫಿಲಮ್ಸ್ ಮಂಗಳೂರು ಬ್ಯಾನರಡಿಯಲ್ಲಿ ಅಭಿಷೇಕ್ ರಾವ್ ನಿರ್ದೇಶನದ ಬಹುನಿರೀಕ್ಷಿತ ತುಳು ಚಲನಚಿತ್ರ ದಿಲ್ ರಂಗ್ 2 ಈಗಾಗಲೇ ತೆರೆಗೆ ಬರಲು ಸಜ್ಜಾಗಿದೆ. ಇದರ ಪೋಸ್ಟರ್ ಬಿಡುಗಡೆ ಸಮಾರಂಭವು ದುಬಾಯಿಯಲ್ಲಿ ನಡೆಯಿತು. ದುಬಾಯಿಯ ಕಲಾ ಪೋಷಕ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್ ಅವರು ಪೋಸ್ಟರನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ದಿಲ್‌ರಂಗ್ ತುಳು ಸಿನಿಮಾಗೆ ಶುಭಹಾರೈಸಿದರು.
ದುಬೈ ಮೂಲದ ನಿತಿನ್ ಎಸ್.ದೇವಾಡಿಗ ಅಭಿನಯದ ದಿಲ್‌ರಂಗ್ ತುಳು ಸಿನಿಮಾ ನವೆಂಬರ್6ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ. ಇದೊಂದು ಮ್ಯೂಸಿಕಲ್ ಮೂವಿಯಾಗಿದ್ದು ಎಲ್ಲರಲ್ಲೂ ನಿರೀಕ್ಷೆಯನ್ನು ಮೂಡಿಸಿದೆ. ಇನ್ನು ಪ್ರಮುಖ ಪಾತ್ರದಲ್ಲಿ ಸಮತಾ ಅಮೀನ್, ವಿಜಿತಾ ಕೊಟ್ಯಾನ್ ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ಕರ್ಕೇರಾ ಅವರು ಸಂಗೀತವನ್ನು ನೀಡಿದ್ದು, ವಂದನಾ ಎಸ್ ಅವರ ಸುಮಧುರ ಕಂಠದಿಂದ ಚಿತ್ರದ ಹಾಡು ಮೂಡಿಬಂದಿದೆ. ಸಿನಿಮಾ ಅಟೋಗ್ರಫಿಯನ್ನು ರಚಿನ್ ಶೆಟ್ಟಿ ನಿರ್ವಹಿಸಿದ್ದಾರೆ. ಕ್ರಿಯೆಟಿವ್ ಫಿಲ್ಮ್ ನಿರ್ಮಾಣದಲ್ಲಿ ಚಿತ್ರ ತಯಾರಾಗಿದ್ದು, ನವೆಂಬರ್ ೬ರಂದು ತುಳು ಸಿನಿಮಾ ರಿಲೀಸ್ ಆಗಲಿದೆ.

Related Posts

Leave a Reply

Your email address will not be published.