ದಿ.ಇದಿನಬ್ಬ ಮಗನ ಮನೆಗೆ ಎನ್.ಐ.ಎ ದಾಳಿ ಪ್ರಕರಣ : ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಮನೆಗೆ ಮುತ್ತಿಗೆ
ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಐಸಿಸ್ ನಂಟು ಆರೋಪದಡಿ ಇತ್ತೀಚಿಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತರು ಆರೋಪಿತರ ಮನೆಗೆ ಮುತ್ತಿಗೆ ಹಾಕಿದ್ದು ಮುತ್ತಿಗೆ ಹಾಕಿದವರನ್ನು ಉಳ್ಳಾಲ ಪೊಲೀಸರು ಬಂದಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಇಂದು ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುಲ್ ರೆಹ್ಮಾನ್ ಬಾಷಾ ಅವರ ಮನೆಗೆ ಮುತ್ತಿಗೆ ಹಾಕಲಾಗಿದೆ. ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮನೆಯ ಗೇಟ್ ವರೆಗೆ ತೆರಳಿದ ಬಜರಂಗದಳದ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದಲ್ಲಿ ಕಳೆದ ವಾರ ನಡೆದ ಎನ್ಐಎ ದಾಳಿಯ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಉಳ್ಳಾಲ ತಾಲೂಕಿನ ಸುಮಾರು 26 ಪ್ರಮುಖ ಸ್ಥಳಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಇಂದು ಏಕ ಕಾಲದಲ್ಲಿ ದೇಶದ್ರೋಹಿ ಜಿಹಾದಿ ಉಗ್ರರ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಅಭಿಯಾನ ನಡೆಸಲಾಗಿತ್ತು. ಇದೇ ವೇಳೆ ಎನ್ಐಎ ದಾಳಿ ನಡೆಸಿದ್ದ ಮನೆಗೆ ಬಜರಂಗದಳ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.