ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ
ದುಬೈ : ಹಲವಾರು ವರ್ಷಗಳಿಂದ ಯು.ಎ.ಇ ಯಾದ್ಯಂತ ಸಾಮಾಜಿಕ ರಂಗದಲ್ಲಿ ಸೇವೆಗೈಯುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ಇದರ ವತಿಯಿಂದ ಮರುಭೂಮಿ ಮಣ್ಣಿನ ಲತೀಫಾ ಆಸ್ಪತ್ರೆ ದುಬೈಯಲ್ಲಿ,ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವು ಬಹಳ ಅಚ್ಚುಕಟ್ಟಾಗಿ ನೆರವೇರಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ. ಇದರ ಶಾಫಿ ಬಜ್ಪೆ ಯವರು ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿಯೊಬ್ಬ ರಕ್ತದಾನಿ ಇನ್ನೊಬ್ಬರ ಜೀವ ರಕ್ಷಕರಾಗಿರುತ್ತಾರೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಮನೋಭಾವನೆಗಳನ್ನು ಬೆಳೆಸಬೇಕು ಎಂಬ ಸಂದೇಶದೊಂದಿಗೆ, ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಶಿಬಿರದಲ್ಲಿ ಬರೋಬ್ಬರಿ ಒಟ್ಟು 105 ಜೀವದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ದಾಖಲೆ ನಿರ್ಮಿಸಿದ್ದರು.ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ ಎಲ್ಲರಿಗೂ
ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ಇದರ ಅಧ್ಯಕ್ಷರಾಗಿರುವ ಜನಾಬ್ ಶಂಸುದ್ದೀನ್ ಉಡುಪಿಯವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.