ದೇವಸ್ಥಾನಗಳ ತೆರವು ವಿಚಾರ: ಸೆ.16ರಂದು ವಿಶ್ವಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ

ರಾಜ್ಯದಲ್ಲಿ ದೇವಸ್ಥಾನಗಳ ತೆರವುಗೊಳಿಸುವ ಸರಿಯಲ್ಲ ರಾಜ್ಯ ಸರಕಾರದಲ್ಲಿ ತಾಲೀಬಾನ್ ಪ್ರೇರಿತ ಅಧಿಕಾರಿಗಳ ಕೃತ್ಯ ನಡೆಯುತ್ತಿದೆ ಎಂದು ಭಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ತಕ್ಷಣವೇ ಅಧಿಕಾರಿಗಳನ್ನು ವಜಾಗೊಳಿಸಬೇಕು. ತೆರವುಗೊಳಿಸಲು ಉದ್ಧೇಶಿಸಿರುವ ದೇವಸ್ಥಾನಗಳ ಪಟ್ಟಿಯನ್ನು ಹಿಂಪಡೆಯಬೇಕು. ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಮತ್ತೆ ಮರು ನಿರ್ಮಿಸಬೇಕು. ಸೆಪ್ಟೆಂಬರ್ ೧೬ ರಂದು ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Related Posts

Leave a Reply

Your email address will not be published.