ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪದ್ಮಶ್ರೀ ಪುರಸ್ಕೃತ ದಿ. ಮಿಲ್ಕಾ ಸಿಂಗ್‌ರ ಸ್ಮರಣೆ
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪದ್ಮಶ್ರೀ ಪುರಸ್ಕೃತ ದಿವಂಗತ ಮಿಲ್ಕಾ ಸಿಂಗ್ ಅವರನ್ನು ಸ್ಮರಣೆ ಮಾಡುವ ಕಾರ್ಯಕ್ರಮವು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ದಿವಂಗತ ಮಿಲ್ಕಾ ಸಿಂಗ್ ಅವರ ಭಾವಚಿತ್ರಕ್ಕೆ ಗಣ್ಯರು ಮಾಲಾರ್ಪಣೆ ಮಾಡಿ ಸಂತಾಪ ಸೂಚಿಸಿದರು. ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಮಾತನಾಡಿ, ಪದ್ಮಶ್ರೀ ಪುರಸ್ಕೃತ ದಿವಂಗತ ಮಿಲ್ಕಾ ಸಿಂಗ್ ಅವರು ಸ್ವಯಂ ಪ್ರಯತ್ನದ ಮೂಲಕ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಧೀಮಂತ ವ್ಯಕ್ತಿಯಾಗಿ ಬಾಳಿ ಬದುಕಿದವರು. ಭಾರತದ ಕ್ರೀಡಾ ಲೋಕದಲ್ಲಿ ಅವರ ಹೆಸರು ಅಚ್ಚಳಿಯದೇ ಉಳಿಯುವಂತಹ ಸಾಧನೆಯನ್ನು ಮಾಡಿದ ಶ್ರೇಷ್ಠ ವ್ಯಕ್ತಿ ಎಂದ ಅವರು ದಿವಂಗತ ಮಿಲ್ಕಾ ಸಿಂಗ್ ಅವರು ಕ್ರೀಡಾಪಟುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದು, ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆನಂತರ ಮಾತನಾಡಿದ ಹಿರಿಯ ಕ್ರೀಡಾಪಟು ಸುನೀಲ್ ಕುಮಾರ್ ಶೆಟ್ಟಿ ನಾನು ಕೂಡ ಕ್ರೀಡಾಪಟುವಾಗಿದ್ದೆ. 1979ರಲ್ಲಿ ಅಥ್ಲೆಟಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದವನು. ನಾವೆಲ್ಲ ಕ್ಯಾಂಪನಲ್ಲಿರುವ ಸಂದರ್ಭದಲ್ಲಿ ಮಿಲ್ಕಾ ಸಿಂಗ್ ಅವರು ನಮ್ಮ ಪ್ರೋತ್ಸಾಹಿಸುತ್ತಿದ್ದರು ಎಂದು ಅವರು ನೆನಪಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ವಲೇರಿಯನ್, ಲಾರೆನ್ಸ್, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.