ನಕಲಿ ಗೊಬ್ಬರ ಅಡ್ಡೆಯ ಮೇಲೆ ರೈತರಿಂದಲೇ ದಾಳಿ

ಅಕ್ರಮವಾಗಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದ ಅಡ್ಡೆಯ ಮೇಲೆ ರೈತರೆ ದಾಳಿಗೈದಿರುವ ಘಟನೆ ನಿಂಬೆನಾಡಿನಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಗಳಗಿಯ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದರು. ಖಚಿತ ಮಾಹಿತಿಯನ್ನು ನಿಂಬೆನಾಡಿನ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡದ್ರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಅದಕ್ಕಾಗಿ ಬೇಸತ್ತ ರೈತರೇ ಅಡ್ಡೆಯ ಮೇಲೆ ದಾಳಿಗೈದು ನಕಲಿ ಗೊಬ್ಬರ ರೇಡ್ ಮಾಡಿದ್ದಾರೆ. ಇನ್ನು ಸ್ಥಳದಲ್ಲಿಯೇ ನಿಂತು ಇಂಡಿ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ನಕಲಿ ಗೊಬ್ಬರದ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

Related Posts

Leave a Reply

Your email address will not be published.