ನನಗೆ ಹಾರ – ತುರಾಯಿ ಬೇಡ, ಪುಸ್ತಕ ಕೊಡಿ : ಸಚಿವ ವಿ.ಸುನೀಲ್ ಕುಮಾರ್ ಹೇಳಿಕೆ

ಅಭಿನಂದಿಸಲು ಹಾರ- ತುರಾಯಿ ಬೇಡ , ಪುಸಕ್ತ ಕೊಡಿ ಎಂಬ ಮನವಿಗೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ಅವರು ನಗರದ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ , ದೇವರ ದರ್ಶನ ಪಡೆದ ಬಳಿಕ ಬಳಿಕ ಸುದ್ಧಿಗಾರದೊಂದಿಗೆ ಮಾತನಾಡಿದ್ರು. ಈಗಾಗಲೇ ಸಾವಿರಾರು ಪುಸ್ತಕಗಳು ನನ್ನ ಬಳಿ ಬಂದಿದೆ. ಕಾರ್ಕಳದ ಗ್ರಂಥಾಲಯಕ್ಕೆ ಪುಸ್ತಕಗಳನ್ನ ಕೊಡುತ್ತೇನೆ . ಜೊತೆಗೆ ಗ್ರಾಮ ಪಂಚಾಯತ್ ಗಳಿಗೆ ಕೊಡುತ್ತೇನೆ ಎಂದು ಅವರು ಹೇಳಿದರು. ತುಳು ಭಾಷೆಯನ್ನ 8ನೇ ಪರಿಚ್ಚೇದನ ಹಾಗೂ ಕನ್ನಡಕ್ಕೆ ಶಾಸ್ತ್ರೀ ಸಂಗೀತ ಸೇರಿಸಲು ಪ್ರಯತ್ನ ಮಾಡುತ್ತೇನೆ. ಅತೀ ಶೀಘ್ರದಲ್ಲೇ ಸಮಸ್ಯೆಯನ್ನ ಬಗೆ ಹರಿಸುವ ಕೆಲಸ ಮಾಡುತ್ತೇನೆ. ಇನ್ನು ವರಿಷ್ಠರು ಹಾಗೂ ಮುಖ್ಯಮಂತ್ರಿ ದೊಡ್ಡ ಹೊಣೆಗಾರಿಕೆ ಕೊಟ್ಟಿದ್ದಾರೆ.ಎರಡು ಇಲಾಖೆಯಲ್ಲೂ ಉತ್ತಮ ಕಾರ್ಯ ಮಾಡುತ್ತೇನೆ ಅಂತಾ ಹೇಳಿದರು. ಈ ವೇಳೆ ಶಾಸಕ ಡಿ.ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ್ ಶೆಟ್ಟಿ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.