ನಳಿನ್ ಕುಮಾರ್ ಕಟೀಲ್‍ಗೆ ಕಾಂಗ್ರೆಸ್‍ನಲ್ಲಿ ಸಿಎಂ ಘೋಷಿಸಿಸುವ ನೈತಿಕತೆ ಇಲ್ಲ : ಹರೀಶ್ ಕುಮಾರ್

ಮಂಗಳೂರು: ಕಾಂಗ್ರೆಸ್‍ನಲ್ಲಿ 2023ಕ್ಕೆ ದಲಿತ ಸಿಎಂ ಅಭ್ಯರ್ಥಿಯಾಗಿ ಮಲ್ಲಿಕಾಜುನ ಖರ್ಗೆ ಅವರನ್ನು ಘೋಷಿಸಿ ಎಂಬ ಹೇಳಿಕೆಯನ್ನು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್‍ನಲ್ಲಿ ಯಾರನ್ನು ಸಿಎಂ ಆಗಿ ಘೋಷಿಸಬೇಕು ಎಂದು ಹೇಳುವ ನೈತಿಕತೆ ಇಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‍ಸಿ ಹರೀಶ್ ಕುಮಾರ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾಂಗ್ರೆಸ್‍ನಲ್ಲಿ ಎಲ್ಲಾ ವರ್ಗದವರಿಗೂ ಸಿಎಂ ಆಗುವ ಅವಕಾಶವನ್ನು ನೀಡಿದೆ ಆದರೆ ಬಿಜೆಪಿಯಲ್ಲಿ ಸಿಎಂ ಆಗಿ ಬಿಎಸ್‍ವೈ ಹಾಗೂ ಜಗದೀಶ್ ಶೆಟ್ಟರ್ ಇಬ್ಬರೂ ಲಿಂಗಾಯಿತ ವರ್ಗದವರು ಹಾಗೂ ಕೇವಲ 11 ತಿಂಗಳು ಒಕ್ಕಲಿಗ ಸಮುದಾಯದ ಡಿವಿಎಸ್ ಆಳ್ವಿಕೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಸಮುದಾಯಕ್ಕೂ ಸಿಎಂ ಆಗಿ ಅವಕಾಶವನ್ನು ನೀಡಿಲ್ಲ. ದೇಶದಲ್ಲಿ 23 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಎಷ್ಟು ರಾಜ್ಯಗಳಲ್ಲಿ ದಲಿತ ಸಿಎಂ ಇದ್ದಾರೆ ಎಂದು ಪ್ರಶ್ನಿಸಿದರು. 2023ರಲ್ಲಿ ನಡೆಯುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದಿಲ್ಲ
ಎಂದು ಬಿಜೆಪಿ ಅವರಿಗೆ ತಿಳಿದಿದ್ದು, ಆದುದರಿಂದಲೇ ರಾಜ್ಯಾಧ್ಯಕ್ಷರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯಾಧ್ಯಕ್ಷರು ದ.ಕ. ಜಿಲ್ಲೆಯ ಸಂಸದರೂ
ಆಗಿದ್ದು, ಜಿಲ್ಲೆಯಲ್ಲಿ ಪ್ರತೀ ವರ್ಷ ಮಳೆಗೆ ರೈಲ್ವೆ ರಸ್ತೆಗೆ ಮಣ್ಣು ಕುಸಿಯುತ್ತಿದೆ. 10 ವರ್ಷಗಳ ಕಾಲ ಕೆಲಸ ಮಾಡಿ ನಂತರ ಉದ್ಘಾಟನೆಯಾದ ಪಂಪ್‍ವೆಲ್ ಮೇಲ್ಸೆತುವೆಯ ಸರ್ವಿಸ್ ರಸ್ತೆ ಅಸಮರ್ಪಕವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿ ದೋಣಿಯಲ್ಲಿ ಸಂಚರಿಸುವ ರೀತಿಯಲ್ಲಿ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ
ಸಂಸದರ ಸುಪರ್ದಿಗೆ ಬರುತ್ತಿದ್ದು, ಅವರು ಈ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಿ ಜನರ ಆತಂಕವನ್ನು ದೂರ ಮಾಡಬೇಕು ಎಂದು ಎಚ್ಚರಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೋಸಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಅವಮಾನಿಸಿದ್ದಾರೆ. ನುಡಿದಂತೆ ನಡೆದವರು, ದಿಟ್ಟ, ನೇರ, ಮೇದಾವಿ, ಆರ್ಥಿಕ ತಜ್ಞರು ಸಿದ್ದರಾಮಯ್ಯರು ಅವರು 5 ವರ್ಷ ಆಡಳಿತ ನಡೆಸಿದಾಗ ರಾಜ್ಯದ ಆರ್ಥಿಕತೆಯನ್ನುಉಳಿಸಿದವರು. ಅವರು ಜನರ ನಂಬಿಕೆಗೆ ಅರ್ಹರಾದವರು. ಬಿಜೆಪಿ ತನ್ನ ರಾಜಕರಣ ಮಾಡಿ,ಎಲ್ದಕ್ಕೂ ತೆರಿಗೆ ಹಾಕಿ ಜನರ ನಂಬಿಕೆಯ ವಿರುದ್ಧ ಹೋಗಿದೆ ಎಂದು ದೂರಿದರು.

ಪ್ರಮುಖರಾದ ಸದಾಶಿವ ಉಳ್ಳಾಲ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಗಣೇಶ್ ಪುಜಾರಿ, ಶುಭೋದಯ ಆಳ್ವ, ಸುರೇಶ್ ಕೋಟೆಕಾರ್, ಅಭಿಷೇಕ್ ಉಳ್ಳಾಲ್, ನಝೀರ್ ಬಜಾಲ್ ಮತ್ತಿತರರು ಇದ್ದರು.

Related Posts

Leave a Reply

Your email address will not be published.