ನ.12 ರಂದು ಭೇಟಿ ಕನ್ನಡ ಆಲ್ಬಾಂ ಸಾಂಗ್ ಯೂಟ್ಯೂಬ್‌ನಲ್ಲಿ ರಿಲೀಸ್

ಮನುಷ್ಯ ಮತ್ತು ಶ್ವಾನದ ನಡುವೆ ಹೆಣೆದ ಕಥೆಯೊಂದಿಗೆ ತಯಾರಾದ ವಿಶಿಷ್ಠ ಶೈಲಿಯ ಹಾಡೊಂದು ಬಿಡುಗಡೆಗೆ ಸಿದ್ಧವಾಗಿದೆ. ಮಂಗಳೂರಿನ ವಿವೇಕ್ ಗೌಡ ನಿರ್ದೇಶಿಸಿ, ನಿರ್ಮಿಸಿರುವ ಭೇಟಿ ಎಂಬ ಹೆಸರಿನ ಕನ್ನಡ ವಿಡಿಯೋ ಆಲ್ಬಾಂ ಸಾಂಗ್ ನವೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಲಿದೆ.

ಶ್ವಾನ ಮತ್ತು ಮನಷ್ಯನ ನಡುವೆ ಸುತ್ತ ಹೆಣೆದ ಕಥೆಯೊಂದು ಆಲ್ಬಾಂ ಸಾಂಗ್ ಮೂಲಕ ತಯಾರಾಗಿದ್ದು, ನವೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಲಿದೆ. ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯಿಂದ 2020 ರ ಸಾಲಿನ ಭಾರತದ ಅತ್ಯದ್ಭುತ ಫೋಟೋ ಗ್ರಾಫರ್ ಎಂಬ ಖ್ಯಾತಿ ಪಡೆದುಕೊಂಡಿರುವ ಮಂಗಳೂರಿನ ವಿವೇಕ್ ಗೌಡ ನಿರ್ದೇಶಿಸಿ, ನಿರ್ಮಿಸಿರುವ ಭೇಟಿ ಎಂಬ ಕನ್ನಡ ವೀಡಿಯೋ ಆಲ್ಬಾಂ ಸಾಂಗ್. ಬ್ಲಿಂಕ್ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಬೇಟಿ ಆಲ್ಬಾಂ ಸಾಂಗ್‌ನ ತಂಡ ಮಾಹಿತಿ ನೀಡಿದರು.

ಈ ಹಾಡಿಗೆ ಸ್ಟ್ರಾಬೆರಿ ಸಿನಿಮಾ ನಿರ್ದೇಶಕ ಅರ್ಜುನ್ ಲೂವಿಸ್ ಸಾಹಿತ್ಯವನ್ನು ಬರೆದಿದ್ದಾರೆ. ಪ್ರಸಾದ ಕೆ. ಶೆಟ್ಟಿ ಅವರು ಸಂಗೀತವನ್ನು ನೀಡಿದ್ದಾರೆ. ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ ಅವರ ಕಂಠದಿಂದ ಈ ಸಾಂಗ್ ಮೂಡಿಬಂದಿದೆ.ವಿವೇಕ್ ಗೌಡ, ನಿರ್ದೇಶನ, ನಿರ್ಮಾಣ ಬೈಟ್ ಅರ್ಜುನ್ ಲೂವಿಸ್, ಸಾಹಿತ್ಯ ಬರೆದವರು. ಮಂಗಳೂರಿನ ಸುತ್ತಮುತ್ತ ಸುಮಾರು 21 ದಿನಗಳ ಕಾಲ ವಿವೇಕ್ ಗೌಡರ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು ಈಗ ಜೀವ ತಾಳಿ ಬಿಡುಗಡೆಗೆ ಸಿದ್ಧವಾಗಿದೆ. ಲುಂಗಿ ಸಿನಿಮಾದ ನಟ ಪ್ರಣವ್ ಹೆಗ್ಡೆ ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ಮಲಯಾಳಂ ನಿರೂಪಕಿ, ತಮಿಳು ಸಿನಿಮಾ ಮೂಕುತಿ ಅಮ್ಮನ್ ಖ್ಯಾತಿಯ ಮಧು ಮೈಲಂಕೋಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಹಾಯಕ ನಿರ್ದೇಶಕರಾಗಿ ನೆಲ್ಸನ್ ಸಿಕ್ವೇರಾ ಕಟೀಲ್ ಶ್ರಮಿಸಿದ್ದಾರೆ. ಮಧು ಮೈಲಂಕೋಡಿ, ನಟಿ, ಪ್ರಸಾದ್ ಕೆ. ಶೆಟ್ಟಿ, ಸಂಗೀತ ನಿರ್ದೇಶಕ

ನವೆಂಬರ್ 12 ರಂದು ಸ್ಯಾಂಡಲ್ ವುಡ್‌ನ ಹೆಸರಾಂತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಈ ಆಲ್ಬಾಂ ಸಾಂಗ್‌ನ್ನು ಬಿಡುಗಡೆ ಮಾಡಲಿದ್ದಾರೆ. ಈ ಹಾಡು ತಂಡದ ಕನಸಿನ ಕೂಸಾಗಿದ್ದು, ಸಾಶಾ ಎಂಬ ನಾಯಿಯ ಪಾತ್ರ ಈ ಹಾಡಿನಲ್ಲಿ ಬಹು ಪ್ರಮುಖವಾಗಿ ಕಾಣಸಿಗಲಿದೆ. ಪ್ರಾಣಿ ಪ್ರೀಯರ ಮನಸ್ಸು ಕದಿಯುವಲ್ಲಿ ಈ ಹಾಡು ಯಶಸ್ವಿಯಾಗುವುದಂತೂ ಕಂಡಿ.

 

 

Related Posts

Leave a Reply

Your email address will not be published.