ಪಂಜಿಮೊಗರುವಿನಲ್ಲಿ ಕೋವಿಡ್ ಲಸಿಕೆ ಶಿಬಿರಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಾಗರಿಕರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರ ಉಚಿತ ಕೋವಿಡ್ ಲಸಿಕಾ ಯೋಜನೆಯಡಿ ಉಚಿತ ಕೋವಿಡ್ ಲಸಿಕಾ ಶಿಬಿರ ನಡೆಯಿತು.
ಪಂಜಿಮೊಗರುವಿನ ಕೂಳೂರು ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ಸೋಮವಾರ ಶಿಬಿರಕ್ಕೆ ಶಾಸಕರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್,ಶಾನ್ವಾಜ್ ಹುಸೇನ್ ಅಧ್ಯಕ್ಷರು ಅಲ್ಪಸಂಖ್ಯಾತ ಮೋರ್ಚಾ ಮಂಗಳೂರು ಉತ್ತರ, ಗಣ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.