ಪಣಂಬೂರು: ಅಗಲಿದ ಅಸ್ಕರ್, ಇಂಟಕ್ ನಾಯಕರಿಗೆ ಶ್ರದ್ಧಾಂಜಲಿ

ಪಣಂಬೂರು: ಹಿರಿಯ ಕಾಂಗ್ರೆಸ್ ನಾಯಕ ಅಸ್ಕರ್ ಫೆರ್ನಾಂಡಿಸ್ ಮತ್ತು ಇಂಟಕ್ ಮುಖಂಡ ಡಿ.ಅರ್.ನಾರಾಯಣ್, ಅನಿಲ್ ಡಿಸೋಜ ಮತ್ತು ಶಶಿ`Àರ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮವು ಪಣಂಬೂರಿನ ಇಂಟಕ್ ಕಚೇರಿಯಲ್ಲಿ ಜರಗಿತು.

ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಎನ್‍ಎಂಪಿಟಿ ಟ್ರಸ್ಟಿ ಅಬೂಬಕರ್ ಕೃಷ್ಣಾಪುರ, ವಿಜಯ್ ಸುವರ್ಣ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸುರೇಶ್ ಪಿ.ಕೆ, ಮತ್ತಿತರರು ಮೃತರಿಗೆ ಸಂತಾಪ ಸೂಚಿಸಿ, ಮೃತರ ಜನಪರ, ಕಾರ್ಮಿಕ ವರ್ಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು.

ಮೃತರ ಕುಟುಂಬಿಕರಾದ ರಿಟ ಸಿಬೆಲ್ ಡಿಸೋಜ, ಏಂಜೆಲಿನ್ ಗ್ಲೆನಿಟ ಡಿಸೋಜ,ಅಕ್ಷ್ ಗ್ಲೆನ್ ಡಿಸೋಜ, ಅಂಕಿತ್, ಚಂದ್ರಾವತಿ, ವಿವಿ`ಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ರಮೇಶ್ `ಭoಡಾರಿ, ಎನ್‍ಎಂಪಿಟಿ ಟ್ರಸ್ಟಿ ಸುಧಾಕರ್,ರೋಹಿತಾಶ್ವ, ಫಾರೂಕ್, ಸಂಪತ್ ನಾಯ್ಕ್, ಸುರೇಶ್, ವಿನೋದ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.