ಪತ್ರಕರ್ತ ಧೀರಜ್ ಪೊಯ್ಯಕಂಡ “ಪರಾಶರ” ಕಾದಂಬರಿ ಬಿಡುಗಡೆ

ಮಂಗಳೂರು: ಪತ್ರಕರ್ತ ಧೀರಜ್ ಪೊಯ್ಯಕಂಡ ಅವರ ಎರಡನೇ ಕಾದಂಬರಿ ’ಪರಾಶರ’ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು.

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಹಾಗೂ ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್. ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು.

ಲೇಖಕ ಧೀರಜ್ ಪೊಯ್ಯಕಂಡ ಅವರು ಮಾತನಾಡಿ, ಸೋಶಿಯಲ್ ಮಿಡಿಯಾಗಳ ದುರ್ಬಳಕೆ ಹಾಗೂ ಅದರಿಂದಾಗುವ ದುಷ್ಪರಿಣಾಮದ ಎಳೆಯನ್ನಿಟ್ಟುಕೊಂಡು ಈ ಕೈಂ, ಸಸೆನ್ಸ್ ಕಾದಂಬರಿ ರಚಿಸಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕಾಣಸಿಗುವ ಚಂಚಲ ಸ್ವಭಾವದ ಮಾನವ ಸಂಬಂಧಗಳು, ಸ್ನೇಹ ಹಾಗೂ ಪ್ರೀತಿಯ ವಿವಿಧ ಆಯಾಮಗಳು ಈ ಕಾದಂಬರಿಯಲ್ಲಿದೆ ಎಂದು ಹೇಳಿದರು.ಮ್ಯಾನೇಜ್‌ಮೆಂಟ್ ಕನ್ಸಲೆಂಟ್ ಹಾಗೂ ಮೈ ಅಂತರಾತ್ಮದ ಸಂಸ್ಥಾಪಕ ವೇಣು ಶರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸೃಷ್ಟಿಯ ಜೊತೆಗೆ ಓದುಗರನ್ನು ಸೃಷ್ಟಿಸುವುದು ಈ ಕಾಲದ ಅಗತ್ಯ ಎಂದು ಹೇಳಿದರು.ಕನ್ನಡಲೋಕ ಹಾಗೂ ಕನ್ನಡ ಪುಸ್ತಕ ವೆಬ್‌ಸೈಟ್‌ನಲ್ಲಿ ಪರಾಶರ ಕಾದಂಬರಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಹಾಗೂ ಕಾದಂಬರಿ ಖರೀದಿಗೆ ಮೊಬೈಲ್ ಸಂಖ್ಯೆ 9632062405 ನ್ನು ಸಂಪರ್ಕಿಸಬಹುದು.

Related Posts

Leave a Reply

Your email address will not be published.