ಪರ್ತಗಳಿ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮಿಗಳು ಅಸ್ತಂಗತ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (76) ಇಂದು ಇಹಲೋಕ ತ್ಯಜಿಸಿ ವಿಷ್ಣುಪಾದ ಸೇರಿದ್ದಾರೆ. 1945ರಲ್ಲಿ ಗಂಗೊಳ್ಳಿಯಲ್ಲಿ ಜನಸಿದ ಶ್ರೀಗಳ ಪೂರ್ವಾಶ್ರಮ ಹೆಸರು ರಾಘವೇಂದ್ರ. ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ1967ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಸನ್ಯಾಸ ಸ್ವೀಕರಿಸಿ 54 ವರ್ಷ ಸುಧೀರ್ಘವಾಗಿ ಮಠವನ್ನು, ಮಠದ ಆಡಳಿತದಲ್ಲಿರುವ ದೇವಾಲಯಗಳನ್ನು , ಮಠದ ಲಕ್ಷಾಂತರ ಶಿಷ್ಯರನ್ನು ಧಾರ್ಮಿಕವಾಗಿ ಮುನ್ನಡೆಸಿ ಅಪಾರ ಪ್ರಗತಿಗೆ ಕಾರಣರಾಗಿದ್ದ ಶ್ರೀಗಳು ಹೃದಯಾಘಾತದಿಂದ ತಮ್ಮ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.