ಪಿಎಂ ಕೇರ್ಸ್ ಯೋಜನೆ ಪಾರದರ್ಶಕತೆ ಹೊಂದಿರಲಿಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ

ಕಾರ್ಕಳ: ಕೋವಿಡ್ ಸಂದರ್ಭ ದೇಣಿಗೆ ಸಂಗ್ರಹಕ್ಕೆ ಬಳಸಿದ ವೇದಿಕೆ ಪಿಎಂ ಕೆರ್ಸ್ ಯೋಜನೆಯು ಪಾರದರ್ಶಕತೆಯನ್ನು ಹೊಂದಿರಲಿಲ್ಲ. ಹಣ ಸಂಗ್ರಹ ಹಾಗೂ ಖರ್ಚುಗಳ ಲೆಕ್ಕ ವಿ ಡದ ಈ ನಿಧಿಯ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರದ ಮಾಜಿ ಸಚಿವ ಮಾಜಿ ಮುಖ್ಯಮಂತ್ರಿ ಯಂ. ವೀರಪ್ಪ ಮೊಯ್ಲಿ ಟೀಕಿಸಿದರು

 

ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಆಡಳಿತದಲ್ಲಿರುವ ಸರಕಾರಗಳಿಗೆ ಜನಕಲ್ಯಾಣ ಮುಖ್ಯವಾಗಬೇಕು ನಮ್ಮ ಪಕ್ಷದ ಹಾಗೂ ವೈಯಕ್ತಿಕ ವರ್ಚಸ್ಸಿನ ಬೆಳವಣಿಗೆಯಲ್ಲ. ಮೋದಿಯವರು ವ್ಯಯಿಸುತ್ತಿರುವ ಜಾಹೀರಾತು ಹಣದ ಮೊತ್ತವೇ ಇದೆಲ್ಲವನ್ನು ಬಹಿರಂಗ ಪಡಿಸುತ್ತದೆ ಎಂದರು. ಕೋವಿಡ್ ಸಂಕಷ್ಟದಿಂದ ದೇಶದ ಜನತೆ ಇನ್ನೂ ಹೊರಬಂದಿಲ್ಲ ಆದರೆ ದೇಶದಲ್ಲಿ ಜನ ಕಲ್ಯಾಣ ಯೋಜನೆ ಜಾರಿಯಲ್ಲಿದೆ ಎಂಬುದು ಈಗಿನ ಪ್ರಶ್ನೆ. ಯಾವುದೇ ಉದ್ಯೋಗ ನೀಡುವ ಬೃಹತ್ ಯೋಜನೆ ಈ ಸರಕಾರ ನಡೆಸುತ್ತಿದೆಯೆ. ಪ್ರತಿದಿನ ಸರಕಾರ ಮಾಡಿರುವ ಜನಕಲ್ಯಾಣ ಯೋಜನೆಯ ವಿಸ್ತರಿಸುವ ಸಾರ್ವಜನಿಕ ರಂಗದ ಬ್ರಹತ್ ಕೈಗಾರಿಕೋದ್ಯಮಗಳ ವಿಸ್ತರಣೆ ಏನಾದರೂಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು. ಪರಿಸರ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಎಡವಿದೆ ನೀರು ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಗತಿ ಪ್ರಮುಖವಾಗಿದೆ ಮೋದಿ ಸರಕಾರದ ಕಾಂಗ್ರೆಸ್ ಸರಕಾರ ಜನಕಲ್ಯಾಣ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದರು.ಕಾರ್ಕಳದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಗ್ಗೂಡಿದ್ದಾರೆ.

ಗಾಂಧಿ ನಡಿಗೆ ಎಂಬ ಕಾರ್ಯಕ್ರಮದ ಮೂಲಕ ಸಂಘಟನೆ ಯಶಸ್ಸಿಯಾಗಿ ಮಾಡಲಾಗುತ್ತಿದೆ. ಕಾರ್ಕಳದಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಹೇಳಿದರು. ಮತಾಂತರ ಹಾಗೂ ಗೊ, ಹತ್ಯೆಹೆಚ್ಚಳ ವಾಗುವುದಕ್ಕೆ ಇದು ಬಿಜೆಪಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರಬಿಪಿನ್ ಚಂದ್ರಪಾಲ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಬ್ಲಾಗ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಮಾಜಿಪುರಸಭಾಧ್ಯಕ್ಷ ಸುಬಿತ್ ಎನ್ನಾರ್, ಪುರಸಭಾ ಸದಸ್ಯ ಶುಭದ ರಾವ್, ಸೋಮನಾಥ ನಾಯಕ್, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.