ಪುತ್ತೂರಿನಲ್ಲಿ ಅಕ್ರಮ ಗೂಡಂಗಡಿಗಳ ತೆರವು: ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ

ಪುತ್ತೂರು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಪುತ್ತೂರು ನಗರ ಸಭೆ ಜು.೨೩ರ ಬೆಳ್ಳಂಬೆಳಗ್ಗೆ ಮುಂದಾಗಿದೆ. ಜೆಸಿಬಿ ಮೂಲಕ ನಗರ ಸಭೆ ಪೌರಾಯುಕ್ತ ಹಾಗೂ ಇತರ ಅಧಿಕಾರಿಗಳ ಸಮಕ್ಷಮದಲ್ಲಿ ಆಕ್ರಮ ಶೆಡ್ ಗಳನ್ನೂ ಕೆಡವಲಾಗುತ್ತಿದೆ.

ತಳ್ಳು ಗಾಡಿಯ ಅನುಮತಿ ಪಡೆದು, ಒಂದಷ್ಟು ಸಮಯದ ಬಳಿಕ ಅಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತಿದ್ದವರಿಗೆ ನಗರ ಸಭೆ ಈ ಮೂಲಕ ಇಂದು ನಸುಕಿನ ವೇಳೆ ಆಘಾತ ನೀಡಿದೆ. ಈ ಅಂಗಡಿಗಳು ನಗರ ಸಭೆಯ ಯಾವುದೇ ಅನುಮತಿ ಪಡೆಯದೇ ವ್ಯವಹಾರ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ.

ಜೆಸಿಬಿ ಮೂಲಕ ಕಾರ್ಯಾಚರಣೆ ವೇಳೆ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವತ: ಉಪಸ್ಥಿತರಿದ್ದೂ ಸಲಹೆ ಸೂಚನೆಗಳನ್ನು ನೀಡುತಿದ್ದರು. ಈ ಸಂದರ್ಭ ಪುತ್ತೂರು ನಗರ ಠಾಣೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.ಕಾರ್ಯಾಚರಣೆ ಮೂಲಕ ನಗರಸಭೆ ವ್ಯಾಪ್ತಿಯ 15ಕಡೆಗಳಲ್ಲಿ ಅಕ್ರಮವಾಗಿ ರಚಿತಗೊಂಡ ಸಣ್ಣ ಪುಟ್ಟ ಅಂಗಡಿಗಳು ತೆರವು ಮಾಡಲಾಗಿದೆ.

 

Related Posts

Leave a Reply

Your email address will not be published.