ಪುತ್ತೂರಿನಲ್ಲಿ ಪವಿತ್ರ ಗುರುವಾರ ಆಚರಣೆ

ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಏಪ್ರಿಲ್ 2 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 6 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ

putturina guruvara acharane

.
ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್ ಚರ್ಚಿನಲ್ಲಿ ಪವಿತ್ರ ಗುರುವಾರವನ್ನು ಆಚರಿಸಲಾಯಿತು. ಪ್ರದಾನ ಧರ್ಮಗುರುಗಳಾಗಿ ವಂದನೀಯ ಸ್ಟ್ಯಾನಿ ಪಿಂಟೊರವರು ಬಲಿ ಪೂಜೆಯನ್ನು ನೆರವೇರಿಸಿದರು. ಪ್ರಭು ಕ್ರಿಸ್ತರ ಪ್ರತಿನಿಧಿಯಾಗಿ, ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ರವರು ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು. ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನವಾದ ಇಂದು ಅದರ ಮಹತ್ವವನ್ನು ಸಾರಿ ಹೇಳಿದರು.


ಸಹಾಯಕ ಧರ್ಮಗುರುಗಳಾದ ವಂದನೀಯ ಕೆವಿನ್ ಲಾರೆನ್ಸ್ ಡಿಸೋಜಾ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ನಡೆಸಿಕೊಟ್ಟರು. ವಂದನಿಯ ಅಶೋಕ್ ರಾಯನ್ ಕ್ರಾಸ್ತಾ ರವರು ವಿವಿಧ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

Related Posts

Leave a Reply

Your email address will not be published.