ಪುತ್ತೂರು: ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಬೋರ್ಡ್ ತೆರವು
ಪುತ್ತೂರು ನಗರದ ಮಧ್ಯಭಾಗದಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಬೋರ್ಡ್ ಅನ್ನು ಇದೀಗ ತೆರವುಗೊಳಿಸಲಾಗಿದೆ. ಪುತ್ತೂರು ಮಹಿಳಾ ಪೋಲೀಸ್ ಠಾಣೆ ಬಳಿಯಿರುವ ಫಡರಲ್ ಬ್ಯಾಂಕ್ ಗೆ ಸಂಬಂಧಪಟ್ಟ ಎಟಿಎಂ ಕೇಂದ್ರದ ಬೋರ್ಡ್ ಇದಾಗಿದ್ದು, ಎಟಿಎಂ ಗೆ ಬರುವ ಗ್ರಾಹಕರು ಪಾರ್ಕಿಂಗ್ ನಡೆಸುವ ಜಾಗದಲ್ಲೇ ಈ ಬೋರ್ಡ್ ಹಾಕಲಾಗಿತ್ತು.
ಇದು ವಾಹನ ಸವಾರರಿಗೆ ತಕ್ಷಣಕ್ಕೆ ಗೋಚರವಾಗದೇ ಇದ್ದ ಕಾರಣ ಹಲವು ದ್ವಿಚಕ್ರ ವಾಹನ ಸವಾರರ ತಲೆಗೆ ಈ ಬೋರ್ಡ್ ನಿಂದಾಗಿ ಗಂಭೀರ ಗಾಯಗಳಾಗಿದ್ದರು. ಅಪಾಯಕಾರಿ ಬೋರ್ಡ್ ಗೆ ಸಂಬಂಧಿಸಿದಂತೆ ಮಾಧ್ಯಮಗಳು ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಇದೀಗ ಬ್ಯಾಂಕ್ ಅಧಿಕಾರಿಗಳು ಅಪಾಯಕಾರಿ ಬೋರ್ಡ್ ತೆರವುಗೊಳಿಸಿದ್ದಾರೆ.