ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್:ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಅಡ್ಡಿ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿದ ಹಿನ್ನಲೆಯಲ್ಲಿ ತುರ್ತಾಗಿ ಹೋಗುವ ಆಂಬ್ಯುಲೆನ್ಸ್‌ಗೆ ಅಡ್ಡಿಯಾದ ಘಟನೆ ನಡೆದಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಒಂದು ಕಡೆ ಕೋವಿಡ್ ಲಸಿಕೆ ನೀಡಿಕೆ ಮತ್ತೊಂದು ಕಡೆ ಉತ್ತಮ ಸೇವೆ ಸಿಗುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದು, ಆಸ್ಪತ್ರೆಗೆ ಬರುವವರು ಆಸ್ಪತ್ರೆಯ ವಠಾರದ ದಾರಿಯಲ್ಲೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ತುರ್ತು ವಾಹನಕ್ಕೆ ತೊಂದರೆ ಆಗುತ್ತಿತ್ತು.

ಈ ನಿಟ್ಡಿನಲ್ಲಿ ಆಸ್ಪತ್ರೆಯ ಗೇಟ್ ಎದುರು ಆಸ್ಪತ್ರೆಯ ಸೆಕ್ಯೂರಿಟಿಗಳು ವಾಹನ ನಿಯಂತ್ರಣ ಮಾಡುತ್ತಿದ್ದರು. ಆದರೆ ಇಂದು ಬಹುತೇಕ ವಾಹನಗಳು ಆಸ್ಪತ್ರೆಯ ಆವರಣದ ಒಳಗೆ ಹೋದರಿಂದ ತುರ್ತು ವಾಹನಗಳಿಗೆ ಹೋಗುವುದು ಅಸಾಧ್ಯವಾಗಿತ್ತು. ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೃದಯ ಸಂಬಂಧಿತ ರೋಗಿಯನ್ನು ಕರದೊಯ್ಯಲು 108 ಆಂಬ್ಯುಲೆನ್ಸ್‌ಗೆ ಆಸ್ಪತ್ರೆಯ ಆವರಣದೊಳಗೆ ಬಂತಾದರೂ ರೋಗಿಯನ್ನು ಕರೆದೊಯ್ಯುವ ವೇಳೆ ಆಸ್ಪತ್ರೆಯ ಆವರಣದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಕೊನೆಗೆ ಸ್ಥಳೀಯ ರಿಕ್ಷಾ ಚಾಲಕರ ಸಹಕಾರದಿಂದ ಆಂಬ್ಯುಲೆನ್ಸ್‌ಗೆ ಸಂಚರಿಸುವಂತಾಯಿತು.

Related Posts

Leave a Reply

Your email address will not be published.