ಪೂರಕ ದಾಖಲೆ ಪಡೆಯದೆ ಮನೆ ಕಟ್ಟಲು ಅನುಮತಿ:ಕಟಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿರುದ್ಧ ಆರೋಪ
ಪಹಣೆ ಪತ್ರದಲ್ಲಿ ಹತ್ತು ಮಂದಿ ಹಕ್ಕುದಾರರಿದ್ದರೂ, ಒರ್ವ ವ್ಯಕ್ತಿ ನೀಡಿದ ಅರ್ಜಿಗೆ ಗ್ರಾ.ಪಂ.ನ ಅಧ್ಯಕ್ಷೆ, ಉಪಾಧ್ಯಕ್ಷೆ ಸಹಿತ ಪಿಡಿಒ ಒಳ ಒಪ್ಪಂದ ನಡೆಸಿ ಅನುಮತಿ ನೀಡುವ ಮೂಲಕ ಅಕ್ರಮ ನಡೆಸಿದ್ದಾರೆ ಎಂಬುದಾಗಿ ಒರ್ವ ಹಕ್ಕುದಾರ ಜಾನ್ ರಿಚಾರ್ಡ್ ತಿಳಿಸಿದ್ದಾರೆ.
ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಪಾರ್ಮ್ ನಂಬರ್ ೧೦ ಸಹಿತ ಪೂರಕ ದಾಖಲೆಗಳೇ ಇಲ್ಲದೆ ನೀಡಿದ ಅರ್ಜಿಗೆ ಕಟಪಾಡಿ ಗ್ರಾ.ಪಂ. ಪಿಡಿಒ ಮಮತ ವಿ. ಶೆಟ್ಟಿ ಪರವಾನಿಗೆ ನೀಡುವ ಮೂಲಕ ಕಾನೂನು ಗಾಳಿಗೆ ತೂರಿದ್ದಾರೆ. ಈ ಕಾನೂನು ಬಾಹಿರ ಕೆಲಸಕ್ಕೆ ತಾಲೂಕು ಪಂಚಾಯಿತ್ ಇಒ ವಿವೇಕನಂದ ಗಾಂವ್ಕರ್ ಸಹಿತ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಆಚಾರ್ಯ, ಉಪಾಧ್ಯಕ್ಷ ಅಬುಬ್ಬಕರ್ ಎ. ಆರ್ ಬೆಂಬಲ ನೀಡಿದ್ದಾರೆ. ಒಂದು ಹಂತದಲ್ಲಿ ಅರ್ಜಿದಾರರ ಪರವಾಗಿ ಮಾತನಾಡಿದ ಪಿಡಿಒ, ಅರ್ಜಿದಾರರು ಮನೆಕಟ್ಟಲು ತಂದ ಸಿಮೆಂಟು ಗಟ್ಟಿಯಾಗುತ್ತೆ ಎಂಬ ನೆಲೆಯಲ್ಲಿ ಅನುಮತಿ ನೀಡಲಾಗಿದೆ ಎಂಬ ಮಾತುಕೂಡಾ ಇದೆ. ಇವರ ಈ ಕಾನೂನು ಬಾಹಿರ ಕಾರ್ಯವನ್ನು ಬಯಲಿಗೆಳೆಯಲು ಯಾವ ಮಟ್ಟದ ಕಾನೂನು ಸಮರಕ್ಕೂ ತಾನು ಸಿದ್ಧ ಎಂಬುದಾಗಿ ಜಾನ್ ರಿಚಾರ್ಡ್ ಎಚ್ಚರಿಸಿದ್ದಾರೆ.