ಪ್ರಮಾಣ ವಚನ ಸ್ವೀಕಾರವನ್ನು ಟಿವಿಯಲ್ಲಿಯೇ ನೋಡಿ ಸಂಭ್ರಮಿಸಿದ ಕೋಟ ಕುಟುಂಬಿಕರು

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದುಕೊಂಡ ಕೋಟ ಶ್ರೀನಿವಾಸ ಪೂಜಾರಿಯವರ ಹುಟ್ಟೂರಾದ ಕೋಟದ ಮನೆಯಲ್ಲಿ ಕುಟುಂಬಿಕರು ಸರಳವಾಗಿ ಸಂಭ್ರಮಿಸಿದರು. ಶ್ರೀನಿವಾಸ ಪೂಜಾರಿಯವರ ಸಚಿವರಾಗುವ ಪ್ರಮಾಣವಚನಕ್ಕೆ ಬೆಂಗಳೂರಿಗೆ ತೆರಳಿದ್ದರೂ ಕೂಡ ಪತ್ನಿ ಶಾಂತಾ ಅವರು ಮನೆಯಲ್ಲಿ ತಮ್ಮ ದೈನಂದಿನ ಕೆಲಸದಲ್ಲಿಯೇ ಮಗ್ನರಾಗಿದ್ದರು. ಕಾರ್ಯಕರ್ತರ ಸದ್ದು ಗದ್ದಲವಿದಲ್ಲದೆ ಕೋಟ ಅವರ ಮನೆ ಸಂಪೂರ್ಣ ಶಾಂತವಾಗಿತ್ತು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವನ್ನು ಮನೆಯವರು ಟಿವಿಯಲ್ಲಿ ನೋಡಿ ಸಂಭ್ರಮಿಸಿದರು.ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತ ಅವರ ಪ್ರಾಮಾಣಿಕ ಕೆಲಸಕ್ಕೆ ಮತ್ತೆ ಅವಕಾಶ ಸಿಕ್ಕಿದೆ. ಪ್ರಾಮಾಣಿಕತೆ ಸರಳತೆ ಮತ್ತು ಕಠಿಣ ಪರಿಶ್ರಮವೇ ಅವರ ಮರು ಆಯ್ಕೆಗೆ ಕಾರಣ. ಯಾವುದೇ ಲಾಬಿ ನಡೆಸಿದೆ ಅವರಿಗೆ ಸಚಿವಗಿರಿ ಸಿಕ್ಕಿದೆ. ಇದು ನಮಗೆಲ್ಲ ಖುಷಿ ತಂದಿದೆ ಎಂದರು.

Related Posts

Leave a Reply

Your email address will not be published.