ಫ್ಲೈಯಿಂಗ್ ಸಿಖ್ ಖ್ಯಾತಿಯ ಭಾರತದ ಮಾಜಿ ಅಥ್ಲಿಟ್ ಮಿಲ್ಕಾ ಸಿಂಗ್ ವಿಧಿವಶ
‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಭಾರತ ಮಾಜಿ ಅಥ್ಲಿಟ್ ಮಿಲ್ಖಾ ಸಿಂಗ್ (91) ಅವರು ಕಳೆದ ರಾತ್ರಿ ನಿಧನರಾದರು. ಕಳೆದ ಕೆಲವು ದಿನಗಳ ಹಿಂದೆ ಜ್ವರ ಪೀಡಿತರಾಗಿದ್ದ ಮಿಲ್ಖಾ ಸಿಂಗ್ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಿಲ್ಖಾ ಅವರ ಪತ್ನಿ ನಿರ್ಮಲ್ ಅವರು ಐದು ದಿನದ ಹಿಂದೆಯಷ್ಟೇ ನಿಧನ ಹೊಂದಿದ್ದರು.
ಟ್ರ್ಯಾಕ್ ಆಂಡ್ ಫೀಲ್ಡ್ ನಲ್ಲಿ ಉನ್ನತ ಸಾಧನೆ ಮಾಡಿದ್ದ ಮಾಡಿದ್ದ ಮಿಲ್ಖಾ ತನ್ನ ವೇಗದಿಂದಲೇ ಹಾರುವ ಸಿಖ್ ಎಂದು ಹೆಸರು ಪಡೆದಿದ್ದರು.
ಮಿಲ್ಖಾ ಸಿಂಗ್ ನಾಲ್ಕು ಬಾರಿ ಏಷ್ಯನ್ಸ್ ಗೇಮ್ಸ್ ನಲ್ಲಿ ಚಿನ್ನದ ಪದಕದ ವಿಜೇತರಾಗಿದ್ದು, 1958 ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. 1960 ರ ರೋಮ್ ಒಲಂಪಿಕ್ಸ್ ನಲ್ಲಿ 400 ಮೀಟರ್ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಗೆದ್ದಿದ್ದು ಮಿಲ್ಖಾ ಅವರ ಅತ್ಯುತ್ತಮ ಸಾಧನೆಯಾಗಿದೆ. 1956 ಹಾಗೂ 1964 ರ ಒಲಂಪಿಕ್ಸ್ ನಲ್ಲಿ ಮಿಲ್ಖಾ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.