ಬಂಟ್ವಾಳದಲ್ಲಿ ಹಸಿರು ನಮನ ಹಾಗೂ ಶ್ರದ್ಧಾಂಜಲಿ ಸಭೆ
ಗದಗ ಜಿಲ್ಲೆಯ ನರಗುಂದದಲ್ಲಿ 41 ನೇ ರೈತಹುತಾತ್ಮ ದಿನಾಚರಣೆಯ ಅಂಗವಾಗಿ ಕೃಷಿ ಉಳಿಸಿ – ಪ್ರಜಾಪ್ರಭುತ್ವ ರಕ್ಷಿಸಿಸಂಕಲ್ಪ ದಿನದಂದು ದೇಶದ ರೈತರ ಸಂಕಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಪ್ರತಿಜ್ಞೆ ಮಾಡಿ ಹಿಂತಿರುಗುವ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹತ್ತಿರ ಭಾರಿ ವಾಹನ ಅಪಘಾತದಲ್ಲಿ ಹುತಾತ್ಮರಾದ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷರಾದ ಎಮ್.ರಾಮು ಚೆನ್ನಪಟ್ಟಣ ಹಾಗೂ ಹಿರಿಯ ಉಪಾಧ್ಯಕ್ಷರಾದ ಜಿ.ಟಿ.ರಾಮಸ್ವಾಮಿಯವರಿಗೆ ಹಸಿರು ನಮನ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಬಂಟ್ವಾಳದ ಲೊರೆಟ್ಟೊಪದವು ಹಿರಿಯ ಪ್ರಾಥಮಿಕ ಶಾಲೆ ಲೊರೆಟ್ಟೊ ಇದರ ಸಭಾಭವನದಲ್ಲಿ ನಡೆಸಲಾಯಿತು.
ಸಭಾಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ವಹಿಸಿದ್ದರು. ರಾಜ್ಯಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಕರ್ನಾಟಕ ಪ್ರಾಂತರೈತಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಯಾದವಶೆಟ್ಟಿ ಸಿ.ಐ.ಟಿ.ಯುನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ,ರಾಜ್ಯ ರೈತಸಂಘ ರಾಜ್ಯಸಮಿತಿಯ ಖಾಯಂ ಆವ್ಹಾನಿತರಾದ ಸನ್ನಿ ಡಿಸೋಜ ರೈತ ಮುಖಂಡರಾದ ಬಿ.ಸುರೇಶ್ ಭಟ್ ಕೊಜಂಬೆ ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು ನುಡಿನಮನ ಸಲ್ಲಿಸಿದರು. ಸಿ.ಐ.ಟಿ.ಯು.ನ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೊಟ್ಯಾನ್,ರೈತ ಮುಖಂಡರಾದ ರೋನಿ ಮೆಂಡೊನ್ಸ,ಸುಧಾಕರ ಜೈನ್ ಕೊಕ್ರಾಡಿ, ಬಾಲಸುಬ್ರಮಣ್ಯ ಹೊಳ್ಳ,ಹರ್ಷಕುಮಾರ್ ಹೆಗ್ಡೆ ತೀರ್ಥರಾಮ ಗೌಡಪೆರ್ನೋಜಿ,ಸೆಬಾಸ್ಟಿಯನ್ ಡಿಸೋಜ,ಸುರೇಂದ್ರ ಕೋರ್ಯ,ರೂಪಾಸ್ ಪಿಂಟೋ,ವಿವಿಯನ್ ಪಿಂಟೋ,ಮಂಜುನಾಥ ಮಡ್ತಿಲ,400 ಕೆ.ವಿ.ವಿದ್ಯುತ್ ಮಾರ್ಗದ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕರಾದ ರೋಯ್ ಕಾರ್ಲೋ,ಡಿ.ವೈ.ಎಪ್.ಐ.ಮುಖಂಡರುಗಳಾದ ತುಳಸಿದಾಸ್ ವಿಟ್ಲ,ಅಲ್ತಾಪ್ ತುಂಬೆ ಹಾಗೂ ಇತರ ರೈತ ಹೋರಾಟಗಾರರು ಭಾಗವಹಿಸಿದ್ದರು. *ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಸ್ವಾಗತಿಸಿ ಜಿಲ್ಲಾ ಉಪಾಧ್ಯಕ್ಷರಾದ ಅಲ್ವೀನ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿ ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ವಂದಿಸಿದರು.