ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಸುಲೈಮಾನ್ ಹಾಜಿ ನಿಧನ : ಎಸ್ ಡಿಪಿಐ ಸಂತಾಪ

ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಉದ್ಯಮಿ ಸುಲೈಮಾನ್ ಹಾಜಿ ರವರು ನಿಧನ ಹೊಂದಿದ್ದು ಇವರ ನಿಧನಕ್ಕೆ ಎಸ್ ಡಿಪಿಐ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ.

ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯನ್ನು ಹೊಂದಿದ ಅವರು ಕುದ್ರೋಳಿ ಜಾಮಿಯ ಮಸೀದಿಯ ಅಧ್ಯಕ್ಷರಾಗಿ ಪ್ರಸ್ತುತ ಟ್ರಸ್ಟಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ತನ್ನ ರೆಸ್ಟೋರೆಂಟ್ ನಲ್ಲಿ ದಿನನಿತ್ಯ ನಿರ್ಗತಿಕರಿಗೆ ಉಚಿತ ಆಹಾರವನ್ನು ನೀಡುತ್ತಿದ್ದರು ಮತ್ತು ಬಡವರ ಪಾಲಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡವರಾಗಿದ್ದಾರೆ ಸುಲೈಮಾನ್ ಹಾಜಿಯವರು.

ಮೃತರ ಪಾರತ್ರಿಕ ಲೋಕವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ, ಆಮೀನ್.

Related Posts

Leave a Reply

Your email address will not be published.