ಬಿಜೆಪಿ ಕ್ಷೇಮ ನಿಧಿ ಯೋಜನೆಗೆ ಬಂಟ್ವಾಳದಲ್ಲಿ ಚಾಲನೆ
ಬಂಟ್ವಾಳ: ಇಬ್ಬರು ಪುಟ್ಟ ಹೆಣ್ಣುಮಕ್ಕಳು ಒಬ್ಬಳು 2 ವರ್ಷದ ಅಂಶಿಕ, ಇನ್ನೊಬ್ಬಳು 3 ತಿಂಗಳ ಮಗು ಪೂರ್ವಿಕ.. ಈ ಮಕ್ಕಳಿಬ್ಬರ ತಾಯಿ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ.ತಾಯಿಯಿಲ್ಲದೆ ತಬ್ಬಲಿಯಾಗಿ ಸದ್ಯ ದೊಡ್ಡಮ್ಮನ ಮಡಿಲಲ್ಲಿ ಬೆಳೆಯುತ್ತಿರುವ ಈ ಪುಟ್ಟ ಕಂದಮ್ಮಗಳ ಮುಂದಿನ ಭವಿಷ್ಯಕ್ಕಾಗಿ ಈಗ ಆಸರೆ ಯಾಗಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪರಿಕಲ್ಪನೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಸ್ಥಾಪಿಸಲಾದ “ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ”
ವೇಣೂರು ಸಮೀಪದ ಪೆರಿಂಜೆಯ ಅನುಸೂಯ ಅವರು ಪೂರ್ವಿಕಳಿಗೆ ಜನ್ಮ ನೀಡಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿಯನ್ನು ಕಳಕೊಂಡ ಈ ಇಬ್ಬರು ಕಂದಮ್ಮರನ್ನು ಮೃತ ಅನುಸೂಯ ಅವರ ಅಕ್ಕ ಬಂಟ್ವಾಳ ತಾ.ನ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನಿವಾಸಿ ರೇವತಿಕೃಷ್ಣಪ್ಪ ಅವರು ತನ್ನ ಮೂವರು ಮಕ್ಕಳ ಜೊತೆಯಲ್ಲಿ ಸದ್ಯ ಆರೈಕೆ ಮಾಡುತ್ತಿದ್ದಾರೆ. ರೇವತಿ ಕೃಷ್ಣಪ್ಪ ಅವರ ಕುಟುಂಬ ಬಡತನದ ನಡುವೆಯು ತನ್ನ ಮೃತ ಸಹೋದರಿಯ ಪುಟ್ಟ ಮಕ್ಕಳನ್ನು ಸಲಹುವ ಹೊಣೆಗಾರಿಕೆಯನ್ನು ಹೊತ್ತು ಮಾನವೀಯತೆ ಮೆರೆದಿದ್ದಾರೆ. ಇವರ ಈ ಮಾನವೀಯ ಕಾರ್ಯ ಕ್ಕೆ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯ ಮೂಲಕ ನೆರವು ನೀಡಿದೆ.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿ ಕ್ಷೇಮ ನಿಧಿ ಯೋಜನೆ ರಾಷ್ಟ್ರದಲ್ಲೇ ಮೊದಲ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿರುವುದು ಹೆಮ್ಮೆಯ ವಿಚಾರ ಎಂದರು.
ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯ ಈ ಕ್ಷೇಮ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ರಾಷ್ಟ್ರ ವ್ಯಾಪಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಹೆತ್ತವರನ್ನು ಕಳೆದುಕೊಂಡ ಅಥವಾ ತೀರಾ ಆರ್ಥಿಕ ಸಂಕಷ್ಟದ ಕುಟುಂಬಕ್ಕೆಆಸರೆಯಾಗಿ ನಿಲ್ಲಬೇಕು ಎಂಬುದು ಬಿಜೆಪಿ ಪಕ್ಷದ ಯೋಚನೆಯಾಗಿದ್ದು ,ದೀನದಯಾಳ್ ಉಪಾಧ್ಯಾಯರಅಂತ್ಯೋದಯದ ಪರಿಕಲ್ಪನೆಯನ್ನು ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ,ರವೀಶ್ ಶೆಟ್ಟಿ,ಮಣಿನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಪುರುಷೋತ್ತಮ ಮಜಲು,ಧನಂಜಯ ಶೆಟ್ಟಿ ಸರಪಾಡಿ, ಸಾಂತಪ್ಪ ಪೂಜಾರಿ, ಶಶಿಕಾಂತ್ ಶೆಟ್ಟಿ , ಪಕ್ಷದ ಪ್ರಮುಖರಾದ ಮಾಧವ ಮಾವೆ ಪುರುಷೋತ್ತಮ ಶೆಟ್ಟಿ , ಸುದರ್ಶನ್ ಬಜ ಚಿದಾನಂದ ರೈ, ಪೂವಪ್ಪ ಪೂಜಾರಿ,ಉಮೇಶ್ ಅರಳ ಮತ್ತಿತರರು ಉಪಸ್ಥಿತರಿದ್ದರು.