ಬಿಜೆಪಿ ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದಿಲ್ಲ- ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಮಂಗಳೂರಿನ ಉರ್ವಸ್ಟೋರ್ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ಮಾಜಿ ಸಚಿವ ಬಿ.ರಮಾನಾಥ್ ರೈ ಸೇರಿದಂತೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ರು. ತದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಲ್ಲೂ, ಹೊಸ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಕೆಲವೊಂದು ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಪಶ್ಚಿಮ ವಾಹಿನಿ ಯೋಜನೆ ಕೂಡ ನಮ್ಮ ಸರಕಾರ ಅಧಿಕಾರದಲ್ಲಿದ್ದ ವೇಳೆ ಆಗಿದ್ದು, 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ ಬಿಜೆಪಿ ಸರಕಾರ ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.ಅಂಬೇಡ್ಕರ್ ಭವನ ನಿರ್ಮಾಣ ಸಮಯದಲ್ಲಿ ಇದ್ದಂತಹ ಜಿಲ್ಲೆಯ ಶಾಸಕರು, ಸಚಿವರನ್ನು ಕಾರ್ಯಕ್ರಮಕ್ಕೆ ಕರೆಯುವುದು ಸಂಪ್ರದಾಯ. ಭವನ ಉದ್ಘಾಟನೆಗೆ ನಮಗೆ ಆಮಂತ್ರಣ ನೀಡಲಿಲ್ಲ ಎಂಬ ನೋವಿಲ್ಲ. ಆದರೆ, ಉದ್ಘಾಟನೆಯ ವೇಳೆ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಯಾವುದೇ ಮಾತನ್ನಾಡದೆ ತೆರಳಿದ ಬಗ್ಗೆ ಬಳಿಕ ದಲಿತ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ವಿಚಾರ ಗಮನಕ್ಕೆ ಬಂದಿದೆ. ಆ ಸಮುದಾಯಕ್ಕೆ ಗೌರವ ನೀಡಬೇಕಿತ್ತು. ದಲಿತ ಸಮುದಾಯ, ಅಂಬೇಡ್ಕರ್‍ಗೆ ಆದ ಅವಮಾನ ಪರೋಕ್ಷವಾಗಿ ನನಗೆ ಆದಂತೆ ಎಂದು ರಮಾನಾಥ ರೈ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್‍ಗಳಾದ ಶಶಿಧರ್ ಹೆಗ್ಡೆ, ಹರಿನಾಥ್, ಭಾಸ್ಕರ್ ಕೆ., ಮುಖಂಡರಾದ ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಸಾಹುಲ್ ಹಮೀದ್, ಲಾರೆನ್ಸ್ ಡಿಸೋಜಾ, ಜೋಕಿಂ ಡಿಸೋಜಾ, ಸದಾಶಿವ ಶೆಟ್ಟಿ, ಎ.ಸಿ. ವಿನಯರಾಜ್,ಟಿಕೆ ಸುಧೀರ್, ಸಂತೋಷ್ ಶೆಟ್ಟಿ, ಹೊನ್ನಯ್ಯ, ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ಸಿ.ಎಂ. ಮುಸ್ತಾ, ರಜನಿಶ್ ಕಾಪಿಕಾಡ್, ಗಿರೀಶ್ ಶೆಟ್ಟಿ, ಚೇತನ್ ಉರ್ವಾ, ಪ್ರೇಮ್ ಬಲ್ಲಾಳ್ ಬಾಗ್, ಶಂಸುದ್ದೀನ್ ಕುದ್ರೋಳಿ, ಶಬೀರ್, ರಾಜೇಂದ್ರ ಚಿಲಿಂಬಿ, ನೀರಜ್ ಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.