ಬಿಜೆಪಿ ಸರ್ಕಾರ ವಾಮಮಾರ್ಗದಿಂದ ಬಂದದ್ದು : ಮಾಜಿ ಸಚಿವ ಆಂಜನೇಯ
ಮಂಗಳೂರು: ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಮಾಜಿ ಸಚಿವ ಆಂಜನೇಯ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು.ಬಿಜೆಪಿ ಸರ್ಕಾರ ವಾಮಮಾರ್ಗದಿಂದ ಬಂದದ್ದು. ಜನಾದೇಶದಿಂದ ಬಂದದ್ದು ಅಲ್ಲ. ಶಾಸಕರನ್ನು ಖರೀದಿ ಮಾಡ್ಕೊಂಡು ಸರ್ಕಾರ ರಚನೆ ಮಾಡಿತ್ತು.ಪ್ರಜಾಸತ್ತಾತ್ಮಕವಾಗಿ ರೂಪುಗೊಂಡ ಸರ್ಕಾರ ಕೂಡಾ ಅಲ್ಲ. ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರನ್ನು ಖರೀದಿ ಮಾಡಿ ಜನಸ್ನೇಹಿ ಸರ್ಕಾರ ಅಂದ್ರು. ಇದು ಜನಸ್ನೇಹಿ ಅಲ್ಲ, ಜನವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಇದೀಗ ಸಿಎಂ ಬದಲಾಗಿದ್ದಾರೆ. ಆದರೆ ಉತ್ತಮ ಜನಪ್ರತಿನಿಧಿ ಬರ್ತಾರೆ ಎಂಬ ವಿಶ್ವಾಸ ನಮಗಿಲ್ಲ,17 ಮಂದಿ ಶಾಸಕರಿಂದ ಯಡಿಯೂರಪ್ಪ ಸಿಎಂ ಆಗಿದ್ದು. ಅವರು ಕಾಂಗ್ರೆಸ್ ಗೆ ದ್ರೋಹ ಮಾಡಿ ಹೋದವರು. ಅವರಿಗೆ ಒಳ್ಳೆಯದಾಗಬಾರದು ಅನ್ನೋದೇ ನಮ್ಮ ಮಾತು ಎಂದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರ್ತದೆ. ರಾಹುಲ್ ಗಾಂಧಿಯವರು ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದರು.