ಬಿ.ಸಿ. ರೋಡ್: ಇಂಧನ ಸಾಗಾಟದ ಟ್ಯಾಂಕರ್ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ

ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಮುಂಭಾಗದಲ್ಲಿ ನಡೆದ ಘಟನೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಇಂಧನ ಸಾಗಿಸಿಕೊಂಡು ಹೋಗುವ ಟ್ಯಾಂಕರ್‌ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಲಾಗಿದ್ದು, ಸಮೀಪದಲ್ಲೇ ಇದ್ದ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಕೂಡಲೇ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಬೈಕಂಪಾಡಿಯಿಂದ ಬೆಂಗಳೂರಿಗೆ ಟ್ಯಾಂಕರ್ ಇಂಧನ ಹೇರಿಕೊಂಡು ಸಾಗುತ್ತಿದ್ದ ವೇಳೆ ವಾಹನದ ಚಕ್ರ ಜಾಮ್ ಆಗಿ ಬೆಂಕಿ ಕಂಡುಬಂದಿದೆ ಎನ್ನಲಾಗಿದೆ. ಆದರೆ ಕೂಡಲೇ ಚಾಲಕ ವಾಹನ ನಿಲ್ಲಿಸಿದ ಕಾರಣ ಯಾವುದೇ ಗಂಭೀರ ಅನಾಹುತ ತಲೆದೋರಲಿಲ್ಲ.

 

Related Posts

Leave a Reply

Your email address will not be published.