ಬೀದಿ ಬದಿ ವ್ಯಾಪಾರಸ್ಥರ ಸಂಘ ರಚನೆ
ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಉಳ್ಳಾಲ ವಲಯ ಸಮಿತಿ ರಚನಾ ಸಭೆಯು ಇಂದು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಜರಗಿತು.
ಸಂಘದ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬೀದಿ ವ್ಯಾಪಾರಸ್ಥರೂ ಘನತೆಯ ಬದುಕು ನಡೆಸಲಿಕ್ಕಾಗಿ ಬೀದಿ ವ್ಯಾಪಾರಿಗಳ ಹೋರಾಟದ ಫಲಶ್ರುತಿಯಾಗಿ ಕಾನೂನು ಜಾರಿಗೆ ಬಂದಿದೆ. ಅಧಿಕಾರಿಗಳು ಕಾನೂನನ್ನು ಅಧ್ಯಯನ ಮಾಡಿ ಬೀದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.
ಉಳ್ಳಾಲ ದರ್ಗಾ ಸಮಿತಿಯ ಉಪಾಧ್ಯಕ್ಷ ಬಾವ ಮೊಹಮ್ಮದ್, ಉದ್ಯಮಿ ಚಂದ್ರಕಾಂತ್, ಸಂಘದ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮೊಹಮ್ಮದ್ ಆಸಿಫ್, ನೌಷಾದ್ ತಲಪಾಡಿ ಉಪಸ್ಥಿತರಿದ್ದರು. ರಿಯಾಜ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.ಅಬೂಬಕ್ಕರ್ ಸ್ವಾಗತಿಸಿ, ಮನ್ಸೂರ್ ವಂದಿಸಿದರು