ಬೃಹತ್ ಉಚಿತ ಲಸಿಕಾ ಶಿಬಿರ : ಅರಿವು ಮೂಡಿಸಲು ಜಾಥಾ

ಪುತ್ತೂರು: ಶುಕ್ರವಾರ ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 76 ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ನಗರಸಭೆ ವ್ಯಾಪ್ತಿಯೊಳಗೆ ಆರು ಕಡೆ ನಡೆಯಲಿದೆ. ಈ ಮೂಲಕ ನಗರಸಭಾ ವ್ಯಾಪ್ತಿಯನ್ನು ಲಸಿಕೆ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಪಡೆಯದ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆದು ಸಹಕರಿಸುವಂತೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.

ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪುತ್ತೂರು ನಗರಸಭೆ ಸಂಯುಕ್ತ ಶ್ರಯದಲ್ಲಿ ಸೆ.17 ಶುಕ್ರವಾರ ತಾಲೂಕಿನಾದ್ಯಂತ ನಡೆಯುವ ಬೃಹತ್ ಉಚಿತ ಲಸಿಕಾ ಶಿಬಿರದ ಅರಿವು ಮೂಡಿಸಲು ಗುರುವಾರ ದರ್ಬೆ ಸರ್ಕಲ್‍ನಿಂದ ಬಸ್ ನಿಲ್ದಾಣದ ತನಕ ನಡೆದ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಶುಕ್ರವಾರ ಸುಮಾರು 20 ಸಾವಿರ ಲಸಿಕೆ ನೀಡುವ ಅಭಿಯಾನ ಹೊಂದಲಾಗಿದೆ. ಯಾರೆಲ್ಲಾ ಲಸಿಕೆ ಪಡೆದಿಲ್ಲ ಅವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.ಜಾಥಾ ದರ್ಬೆ ಸರ್ಕಲ್‍ನಿಂದ ಆರಂಭಗೊಂಡು ಬಸ್ ನಿಲ್ದಾಣದ ತನಕ ಬಂದು ಬಳಿಕ ಪುರಭವನದಲ್ಲಿ ಸಮಾಪನಗೊಂಡಿತು.
ಜಾಥಾದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್‍ಮ ದೀಕ್ಷಾ ಪೈ, ಯಶೋದಾ ಹರೀಶ್, ಯೂಸುಪ್, ಶಿವರಾಮ ಸಫಲ್ಯ, ಪೌರಾಯುಕ್ತ ಮಧು ಎಸ್.ಮನೋಹರ್, ನಗರಸಭೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.