ಬೆಳಪುವಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಘಾಟನೆಗೆ ಮಾಜಿ ಸಚಿವ ಸೊರಕೆಯ ಅವಗಣನೆ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಬೆಳಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಮಾಜಿ ಸಚಿವ ವಿಜಯಕುಮಾರ್ ಸೊರಕೆಯವರ ಹೆಸರನ್ನು ಮುದ್ರಿಸದೆ ಸೌಜನ್ಯಕ್ಕಾಗಿಯಾದರೂ ಆಹ್ವಾನ ನೀಡದೆ ಕಡೆಗಣಿಸಿರುವುದನ್ನು ವಿರೋಧಿಸಿ ಕಾಪು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಕಾಲೇಜು ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ರಸ್ತೆಯನ್ನೂ ಸರಿಪಡಿಸಿಲ್ಲ. ವಸತಿ ನಿಲಯವನ್ನೂ ಮಾಡಿಲ್ಲ. ನಮ್ಮ ಸರಕಾರ ಮಾಡಿದ ಯೋಜನೆಯನ್ನು ತನ್ನದೆಂದು ಇಲ್ಲಿಯ ಶಾಸಕರು ಹೇಳುತ್ತಿದ್ದು, ಇದು ಸಂಪೂರ್ಣವಾಗಿ ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿದ ಯೋಜನೆ. ಪರಿಸರದಲ್ಲಿರುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವಲ್ಲಿ ವಿಫಲವರಾದವರು ಮೊದಲು ಅದನ್ನು ಸರಿಪಡಿಸಲಿ. ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಿಲ್ಲ. ಅದು ಪ್ರೊಟೊಕಾಲ್ ಆದರೆ ಪ್ರೊಟೊಕಾಲ್‌ನ್ನು ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಸಚಿವ ಅಶ್ವಥ್ ನಾರಾಯಣ್‌ರವರೊಂದಿಗೆ ಮಾತನಾಡುತ್ತೇವೆ ಎಂದರು.


ಕಾಂಗ್ರೆಸ್ ಮುಖಂಡರಾದ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನ ಸಮಗ್ರ ಅಭಿವೃದ್ಧಿಯ ರುವಾರಿಯಾದ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಬೆಳಪುವಿನಲ್ಲಿ ನೂತನವಾಗಿ ಆಗಿರುವ ಅಭಿವೃದ್ಧಿ ಎಲ್ಲವೂ ಕಾಂಗ್ರೆಸ್ ಸರಕಾರ ಇದ್ದಾಗ ಆದ ಕೆಲಸಗಳು. ಇದನ್ನು ಇಲ್ಲಿನ ಶಾಸಕರು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾಕಾರರು ಪೊಲಿಟೆಕ್ನಿಕ್ ಕಾಲೇಜಿನ ಧರಣಿ ಎದುರು ಕುಳಿತು ಸ್ಥಳೀಯ ಆಢಳಿತದ ವಿರುದ್ದ ಘೋಷಣೆ ಕೂಗಿದರು. ಇಧೆ ವೇಳೆ ಅಲ್ಲಿಗೆ ಆಗಮಿಸಿದ ಸಚಿವ ಅಶ್ವಥ್ ನಾರಾಯಣ್ ಸೊರಕೆಯವರನ್ನು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರಿಪರಿಯಾಗಿ ವಿನಂತಿಸಿದರೂ, ಸೊರಕೆಯವರು ತನ್ನ ಬೆಂಬಲಿಗರ ಮಾತಿಗೆ ಬೆಲೆ ಕೊಟ್ಟು, ಅಲ್ಲಿಂದ ಹೊರ ನಡೆದರು.


ಈ ಸಂದರ್ಭದ ಕಾಂಗ್ರೆಸ್ ಕಾಪು ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಮುಖಂಡರಾದ ಡಾ. ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ರಮೀಝ್ ಹುಸೈನ್‌ಪಡುಬಿದ್ರಿ, ಶರ್ಫುದ್ಧೀನ್ ಶೇಖ್, ಸರಸು ಬಂಗೇರ, ಅಖಿಲೇಶ್ ಕೊಟ್ಯಾನ್ , ಆಶಾ ಕಟಪಾಡಿ, ಜಿತೇಂದ್ರ ಪುಟಾರ್ಡೊ, ಯಶವಂತ ಶೆಟ್ಟಿ, ಪ್ರಶಾಂತ್ ಜತ್ತನ್ನ, ಯು.ಸಿ ಶೇಖಬ್ಬ, ವಾಮನ ಕೋಟ್ಯಾನ್ ನಡಿಕುದ್ರು, ಜ್ಯೋತಿ ಮೆನನ್, ರಿಯಾಜ್ ಪಡುಬಿದ್ರಿ, ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.