ಬೆಳ್ತಂಗಡಿಯ ನಿಡ್ಲೆ ಗ್ರಾಮದಲ್ಲಿ ಕಾಡುಕೋಣಗಳ ಉಪಟಳ

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಡುಕೊಣಗಳ ಉಪಟಳದಿಂದ ಅಲ್ಲಿನ ಕೃಷಿಕರು ಬೇಸತ್ತಿದ್ದಾರೆ. ಗ್ರಾಮದ ಕರಂಬಿತ್ತಿಳು ಎಂಬಲ್ಲಿ ಸುಮಾರು15 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿನ ನಿವಾಸಿಗಳು ದಿನಾಲೂ ರಾತ್ರಿ ನಿದ್ದೆಗೆಟ್ಟು ಕಾಡು ಕೋಣಗಳನ್ನು ಓಡಿಸುವಂತಾಗಿದೆ.

ನಿನ್ನೆ ಬೆಳಿಗ್ಗೆ ಎರಡು ಕಾಡು ಕೋಣಗಳು ಜಿದ್ದಾ ಜಿದ್ದಿಗೆ ನಿಂತಿದ್ದು ಸುಮಾರು ಅರ್ಧ ಗಂಟೆ ಕಾಲ ಕಾದಾಡಿವೆ. ಕೃಷಿಕರ ಅಡಿಕೆ ತೋಟ, ಕೊಕ್ಕೋ ಗಿಡ ಹಾಗೂ ಇತರ ಕೃಷಿಗಳನ್ನು ನಾಶ ಮಾಡುತ್ತಿದೆ. ಅಲ್ಲಿನ ನಿವಾಸಿಯಾದ ಸುಧಾಕರ್ ಭಟ್ ಮಾತನಾಡಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ, ಅವರು ಉಡಾಫೆಯ ಉತ್ತರ ಕೊಡುತ್ತಿದ್ದಾರೆ,ನಮಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ಹೇಳಿದರು. ಏನೇ ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು.

 

Related Posts

Leave a Reply

Your email address will not be published.