ಬೈಂದೂರಿನ ನಾಡಾ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ
ಬೈಂದೂರು ತಾಲೂಕು ನಾಡ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲೆ ಹೆಮ್ಮುಂಜೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಲಸಿಕೆ ಹಾಕಿಸಿಕೊಳ್ಳಲು ದೂರದಿಂದ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಲಸಿಕೆ ದೊರಕುವಂತೆ ಮಾಡುವಲ್ಲಿ ಪಂಚಾಯತ್ ಸಹಯೋಗದೊಂದಿಗೆ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ನೀಡುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಸಿಕೆ ನೀಡುವುದರೊಂದಿಗೆ ಲಸಿಕೆ ಮಹತ್ವವನ್ನು ತಿಳಿಸಿದರು.
ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಿಕ್ಮಮರಿಯವರು ಪ್ರತಿಯೊಬ್ಬ ನಾಗರಿಕರು ಕೋವಿಡ್ ತಡೆಗಟ್ಟುವಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಕೊಳ್ಳಬೇಕಾಗಿದೆ. ಮಾಸ್ಕ್ ಮತ್ತು ಅಂತರ ಕಾಯ್ದುಕೊಂಡು ಆರೋಗ್ಯವಂತರಾಗಿ ಬದುಕನ್ನು ಕಟ್ಟಿಕೊಳ್ಳಲು ಲಸಿಕೆ ಅತ್ಯಗತ್ಯ ಎಂದು ಹೇಳಿದರು.