ಬೈಲೂರಿನಲ್ಲಿ ಅಧಿಕಾರಿಗಳ ಮೌನಕ್ಕೆ ಬಲಿಯಾದ ರಂಗಮಂದಿರ

ಇದು ಇತಿಹಾಸ ಕಂಡಿರುವ ಪುರಾತನ ಮಂಟಪ, ಈ ಮಂಟಪ ಇರುವುದು ಯಾವುದು ಕುಗ್ರಾಮದಲ್ಲಿ ಅಲ್ಲ ಬದಲಾಗಿ ಇತಿಹಾಸ ಪ್ರಸಿದ್ಧ ಶಿಲ್ಪ ಕಲೆಗಳ ತವರೂರೆಂದೇ ಪ್ರಖ್ಯಾತ ಗೊಂಡಿರುವ ಊರಿನಲ್ಲಿ, ಅನೇಕ ಭಾರಿ ಈ ಮಂಟಪವನ್ನು ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ಈ ಭಾಗದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.

ವಿಶ್ವ ವಿಖ್ಯಾತ ಬೇಲೂರು ಯಾರಿಗೆ ತಾನೆ ಗೊತ್ತಿಲ್ಲ ಹೇಳ್ರಿ,, ಈ ಪುಣ್ಯ ಕ್ಷೇತ್ರದ ದರ್ಶನಕ್ಕೆ ಇಂದಿಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಿಂದ ಕೇವಲ 25 ರಿಂದ 30 ಮೀಟರ್ ಅಂತರದಲ್ಲಿರುವ ಬಯಲು ರಂಗ ಮಂಟಪ ಈ ಮಂಟಪ ನೆಲಮಟ್ಟದಿಂದ ಸುಮಾರು 10 ಅಡಿಗೂ ಎತ್ತರದಲ್ಲಿದ್ದು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ, ಆದರೆ ಹಲವು ವರ್ಷಗಳಿಂದ ಇದರ ನಿರ್ವಹಣೆ ಇಲ್ಲದೆ ಈ ಮಂಟಪವು ಸಂಪೂರ್ಣ ಕುಸಿದು ಬೀಳುವ ಹಂತ ತಲುಪಿದ್ದು, ಇಂದು ಇದರ ಸುತ್ತ ಸ್ವಚ್ಛತೆಯೂ ಇಲ್ಲದೆ ಮಧ್ಯ ಬಾಟಲಿಗಳು ಮತ್ತು ಕಸ ರಾಶಿ ರಾಶಿಯಾಗಿ ಬಿದ್ದಿದ್ದರು ಬೇಲೂರು ದೇವಲಯದ ಆಡಾಳಿತಾಧಿಕಾರಿಗಳು ಸ್ವಚ್ಚತೆ ಬಗ್ಗೆಯೂ ಗಮನ ಕೊಡದಿರುವುದು ದುರಂತಕಾರಿ ವಿಚಾರ.

ಈ ಮಂಟಪದಲ್ಲಿ ದಸರಾ ಸಂದರ್ಭದಲ್ಲಿ ಶ್ರೀ ಚನ್ನಕೇಶವಸ್ವಾಮಿಯ ಉತ್ಸವ. ಗೌರಿ ಗಣೇಶ ಪ್ರತಿಷ್ಠಾಪನೆ. ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನೆ. ಸೇರಿದಂತೆ ವಿವಿಧ ಧಾರ್ಮಿಕ ಮತ್ತು ವಿವಾಹ ಸಮಾರಂಭ ಆಚರಿಸುತ್ತಿದ್ದರು. ಆದರೆ ಸಾರ್ವಜನಿಕವಾಗಿ ಉಪಯೋಗಕ್ಕೆ ಬರುವ ಈ ಮಂಟಪದ ವ್ಯವಸ್ಥೆ ಇಂದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ. ಈ ವಿಚಾರವಾಗಿ ಹಲವು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದರು ಕೇಂದ್ರ ಪುರಾತತ್ವ ಇಲಾಖೆಯಾಗಲಿ ರಾಜ್ಯ ಮುಜರಾಯಿ ಇಲಾಖೆ ಯಾಗಲಿ ಈ ಮಂಟಪದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಮಾಡುವಲ್ಲಿ ಹಿಂದೇಟು ಹಾಕುತ್ತಿರುವುದು ಏತಕ್ಕಾಗಿ ಎಂಬುದೇ ಬೇಲೂರು ಜನತೆಯ ಪ್ರಶ್ನೆಯಾಗಿದೆ.

ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಶಾಸಕರು ಈಗಾಗಲೇ ತಾಲ್ಲೂಕಿನ ಹಲವು ಭಾಗಗಳಲ್ಲಿ ಅಭಿವೃದ್ಧಿಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಚೆನ್ನಕೇಶವ ದೇವಾಲಯದ ಪಕ್ಕದಲ್ಲಿನ ಬಯಲು ರಂಗಮಂದಿರದ ಜೀರ್ಣೋದ್ಧಾರ ಕಾರ್ಯದಲ್ಲಿ ಮೃದು ದೂರಣೆ ತೋರುತ್ತಿರುವುದು ಸರಿಯಲ್ಲ. ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಿಂದ ಬರುವ ಪ್ರವಾಸಿ ತಾಣ ಇದು. ಹಾಗೂ ಈ ರಂಗಮಂದಿರದಲ್ಲಿ ನಾನು ನೋಡಿದಂತೆ ಅನೇಕ ಜನಪರ ಕೆಲಸ ಮಾಡಿಕೊಂಡು ಬರುತ್ತಿದ್ದರು. ಆದರೆ ಇಂದು ಈ ರಂಗಮಂದಿರ ಖುಷಿಯುವ ಹಂತಕ್ಕೆ ಬಂದಿದ್ದರು ಶಾಸಕರು ಮತ್ತು ಅಧಿಕಾರಿಗಳು ಮೌನವಾಗಿ ಇರುವುದು ದುರಂತಕಾರಿ ವಿಚಾರ, ಏನಾದರೂ ಅನಾಹುತ ಸಂಭವಿಸುವುದಕ್ಕಿಂತ ಮೊದಲು ಹೆಚ್ಚೆತ್ತುಕೊಂಡು ಜೀರ್ಣೋದ್ಧಾರಕ್ಕೆ ಮುಂದಾಗದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೋರಾಟದ ಆದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ದೇವಾಲಯದ ಕಾರ್ಯನಿರ್ವಹಣಾಧಿಕಾರಿ ವಿದ್ಯೂನ್ ಲತಾ ಮಾತನಾಡಿ ಈ ರಂಗಮಂದಿರದ ಜೀರ್ಣೋದ್ಧಾರದ ವಿಚಾರವಾಗಿ ನಾನು ಕೂಡ ಸತತ ಎರಡು ವರ್ಷಗಳಿಂದ ಮುಜರಾಯಿ ಇಲಾಖೆಗೆ ಅರ್ಜಿ ಬರೆಯುತ್ತಿದ್ದೇನೆ. ಇಲಾಖೆಯಿಂದ ಅನುಮತಿ ಸಿಕ್ಕಿದ ಕೂಡಲೇ ಜೀರ್ಣೋದ್ಧಾರಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

 

ಸದ್ಯ ಅದೇನೇ ಇರಲಿ ತಾಲ್ಲೂಕಿನ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿರುವ ಶಾಸಕರು ಸ್ವಲ್ಪ ರಂಗಮಂದಿರದ ಅಭಿವೃದ್ಧಿ ಕಡೆಗೂ ಗಮನಕೊಟ್ಟು ಈ ರಂಗಮಂದಿರ ಉಳಿಸಲು ಮುಂದಾಗಲಿ ಎಂಬುದು ನಮ್ಮ ವಾಹಿನಿಯ ಆಶಯ.

 

Related Posts

Leave a Reply

Your email address will not be published.