ಬೊಮ್ಮನಹಳ್ಳಿ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ರಮಾನಾಥ್ ರೈ ಪ್ರಚಾರ
ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.ಇತ್ತ ಮಾಜಿ ಸಚಿವ ರಮಾನಾಥ್ ರೈ ಅವರು ಕಾಂಗ್ರೆಸ್ ಅಭ್ಯರ್ಥಿ ಶೀನಿವಾಸ ಯಾನೆ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇನ್ನುಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಗಳಲ್ಲಿ ಬರುವ ಗ್ರಾಮ ಪಂಚಾಯತ್ ಗಳಾದ ಕೊಪ್ಪರಿಸಿ ಕೊಪ್ಪ, ಬೊಮ್ಮನಹಳ್ಳಿ ಗ್ರಾಮಪಂಚಾಯತ್ ಕರಗುದುರಿ ಗ್ರಾಮಪಂಚಾಯತ್, ಹುಲ್ಲತ್ತಿ ಗ್ರಾಮ ಪಂಚಾಯತ್,ಬೈಚುಳ್ಳಿ ಗ್ರಾಮ ಪಂಚಾಯತ್, ಏಳವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಗಳಲ್ಲಿ
ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದ ತಂಡದಿಂದ ಬಿರುಸಿನ ಚುನಾವಣೆ ಪ್ರಚಾರ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಿ ಆರ್ ಪಾಟೀಲ್, ಮಾಜಿ ಶಾಸಕರಾದ ರಾಮ್ ಕೃಷ್ಣ, ಕಾಂಗ್ರೆಸ್ ಮುಖಂಡರಾದ ಮುಕುಂದ್ರ ರಾವ್ ಭವಾನಿ ಮಟ್, ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಯಸಿರ್ ಖಾನ್ ಫಾಟನ್, ಕೆಪಿಸಿಸಿ ಸಂಯೋಜಕರಾದ ಅನಿತಾ ರಾವ್ ಪ್ರಮುಖರಾದವರು ಪ್ರಚಾರದಲ್ಲಿ ಭಾಗಿಯಾಗಿದ್ದರು.