ಬೋರ್‍ವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂಬ ಆರೋಪ : ವ್ಯಕ್ತಿಯೋರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ

ಬಂಟ್ವಾಳ: ಬೊರೆವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂದು ಆರೋಪಿಸಿ ವ್ಯಕ್ತಿಯೊರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ ಘಟನೆ ಸಂಗಬೆಟ್ಟು ಗ್ರಾಮದ ಅಳಿಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಲ್ವಿನ್ ರಿಚರ್ಡ್ ಫಲೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳೀಯ ನಿವಾಸಿ ಅನಿಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ರಿಚರ್ಡ್ ಫಲೇರಾ ತನ್ನ ತಂದೆಯಿಯೊಂದಿಗೆ ಅಳಿಕೆ ಎಂಬಲ್ಲಿ ನಿಂತಿದ್ದ ವೇಳೆ ಬಂದ ಅನಿಲ್ ರಸ್ತೆ ಹಾಳಾಗಿರುವುದಕ್ಕಾಗಿ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಬೋಲ್ಡ್ರಸ್ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಆರೋಪಿಯು ರಿಚರ್ಡ್ ಅವರ ಹೆಲ್ಮೆಟ್‍ನಿಂದ ದ್ವಿಚಕ್ರ ವಾಹನದ ಡೂಮಿಗೆ ಹಾನಿಗೊಳಿಸಿರುವುದಾಗಿ ದೂರಿನಲ್ಲಿ ತಿಲಿಸಿದ್ದಾರೆ. ಆರೋಪಿಯ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.